ಕೊಲಂಬೊ, ಎ. 26:ರವಿವಾರ ನಡೆದ ಸ್ಫೋಟಗಳ ಬಳಿಕ,ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದ್ದು, ಮುಸ್ಲಿಮರು ಶುಕ್ರವಾರ ಸೈನಿಕರ ಭಾರೀ ಬಂದೋಬಸ್ತ್‌ನಲ್ಲಿ ಜುಮಾ ನಮಾಝ್ ನಡೆಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯನ್ನು ಮನೆಯಲ್ಲಿಯೇ ನಡೆಸುವಂತೆ ಸರಕಾರ ಕರೆ ನೀಡಿತ್ತಾದರೂ, ನೂರಾರು ಮುಸ್ಲಿಮರು ಮಸ್ಜಿದುಸ್ಸಲಾಮ್ ಜುಮ್ಮಾ ಮಸೀದಿಯಲ್ಲಿ ಜಮಾಯಿಸಿದರು. ಶ್ರೀಲಂಕಾಕ್ಕೆ ಶಾಂತಿ ಮರಳಲು ನೆರವು ನೀಡುವಂತೆ ಎಲ್ಲ ಧರ್ಮಗಳ ಜನರಿಗೆ ಈ ಪ್ರಾರ್ಥನೆಯ ವೇಳೆ ಮನವಿ ಮಾಡಲಾಯಿತು.
‘‘ನಾವು ಕ್ರೈಸ್ತರು, ಬೌದ್ಧರು ಮತ್ತು ಹಿಂದೂಗಳೊಂದಿಗೆ ಕೆಲಸ ಮಾಡುತ್ತೇವೆ. ಬಾಂಬ್ ಸ್ಫೋಟಗಳು ನಮ್ಮೆಲ್ಲರಿಗೆ ಹಾಕಿದ ಬೆದರಿಕೆಯಾಗಿದೆ. ಕೆಲವೇ ಜನರು ಮಾಡಿದ ಕೃತ್ಯಗಳಿಂದಾಗಿ ನಮ್ಮ ಸುಂದರ ದೇಶಕ್ಕೆ ಈ ಪರಿಸ್ಥಿತಿ ಎದುರಾಗಿದೆ’’ ಎಂದು ಜುಮಾ ಪ್ರಾರ್ಥನೆಗೆ ಆಗಮಿಸಿದವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.