janadhvani

Kannada Online News Paper

ಜೆಟ್‍ ಏರ್ವೇಸ್‍ ಮುಗ್ಗಟ್ಟು: ಜೇಟ್ಲಿ ,ಜಯಂತ್‍ ಸಿನ್ಹಾ ಕಾರಣ-ಸುಬ್ರಮಣಿಯನ್ ಸ್ವಾಮಿ

ನವದೆಹಲಿ:  ಜೆಟ್‍ ಏರ್’ವೇಸ್‍ ಆರ್ಥಿಕ ಮುಗ್ಗಟ್ಟಿಗೆ ಕೇಂದ್ರ ಹಣಕಾಸು ಸಚಿವ ಅರುಣ್‍ ಜೇಟ್ಲಿ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್‍ ಸಿನ್ಹಾ ಕಾರಣ ಎಂದು ಬಿಜೆಪಿ ನಾಯಕ ಸುಬ್ರಮಣ್ಯನ್‍ ಸ್ವಾಮಿ ಆರೋಪಿಸಿದ್ದಾರೆ.

ಪಕ್ಷ ಮತ್ತು ಸರ್ಕಾರದ ಘನತೆ ಕುಗ್ಗಿಸಲು ಜೇಟ್ಲಿ ಮತ್ತು ಸಿನ್ಹಾ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸ್ವಾಮಿ ಗಂಭೀರ ಆರೋಪ ಮಾಡಿದ್ದು, ಕೂಡಲೇ ಸಂಸ್ಥೆಯನ್ನು ಏರ್ ಇಂಡಿಯಾ ಸಂಸ್ಥೆಯೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

Subramanian Swamy@Swamy39

I urge Namo to tell Jaitely and Jayant Sinha to lay off trying to parcel off Jet Airways to Spice Jet. It smells of favouritism and misuse of official position that will damage BJP’s reputation8,91710:05 AM – Apr 25, 2019Twitter Ads info and privacy2,859 people are talking about this

ಈ ಕುರಿತು ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹಿಸಿರುವ ಸ್ವಾಮಿ, ಪಕ್ಷ ಮತ್ತು ಸರ್ಕಾರದ ಘನತೆಯ ಉಳಿವಿಗಾಗಿ ಜೇಟ್ಲಿ ಮತ್ತು ಸಿನ್ಹಾ ಅವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com