ಅಬುಧಾಬಿ: ಇಮಾರಾತ್‌ನ ವಿವಿಧ ಭಾಗಗಳಿಂದ ಕಿಕ್ಕಿರಿದು ಸೇರಿದ ಅನಿವಾಸಿಗಳು ಮತ್ತು ಸ್ವದೇಶಿಗಳ ಹೃದಯಾಂತರಾಳದ ಅಭಿನಂದನೆಯನ್ನು ಇಂಡಿಯನ್ ಗ್ರಾಂಡ್ ಮುಫ್ರಿ ಸ್ವೀಕರಿಸಿದರು.
ಗ್ರಾಂಡ್ ಮುಫ್ತಿಯಾಗಿ ನಿಯುಕ್ತಿಗೊಂಡ ನಂತರ ಇದೇ ಪ್ರಥಮ ಬಾರಿಗೆ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಯುಎಇ ತಲುಪಿದ್ದರು.
ಅವರ ಕಾರ್ಯ ಕ್ಷೇತ್ರದಲ್ಲಿ ಪ್ರಾಥಮಿಕ ಹಂತದಲ್ಲೇ ಹೆಗಲು ನೀಡುತ್ತಾ ಬಂದ ಯುಎಇಯ ರಾಜಧಾನಿ ನಗರವು ಚಾರಿತ್ರಿಕ ಸನ್ಮಾನವನ್ನೇ ಏರ್ಪಡಿಸಿದ್ದವು. ಈ ಮಹತ್ವಪೂರ್ಣ ಸಮಾರಂಭಕ್ಕೆ ನಗರದ ಹೃದಯಭಾಗದಲ್ಲಿರುವ ಗಾಲ್ಫ್ ಕ್ಲಬ್‌ನ ವಿಶಾಲ ಮೈದಾನವು ಸಾಕ್ಷಿಯಾಯಿತು.
ಸಾಯಂಕಾಲದ ಹೊತ್ತಿಗೆ ಯುಎಇಯ ವಿವಿಧ ಕಡೆಗಳಿಂದ ಬಂದ ಪ್ರೀತಿಪಾತ್ರರ ಸಾನಿಧ್ಯದಿಂದ ಮೈದಾನವು ಕಿಕ್ಕಿರಿದು ಬಿಟ್ಟಿತು. ಕಾರ್ಯಕ್ರಮ ಪ್ರಾರಂಭಿಸಿದಾಗಿ ಹಲವರಿಗೆ ವೇದಿಕೆ ವರೆಗೆ ಬರುವುದಕ್ಕೂ ಸಾಧ್ಯವಾಗದಂತೆ ನಗರವು ತುಂಬಿ ತುಲುಕಿತು. ಅರಬ್ ದೇಶಗಳಿಗೆ ಆಧರಣೀಯರಾದ ಪಂಡಿತರನ್ನು ಬರಮಾಡಿಕೊಳ್ಳಲು ವಿವಿಧ ಕಡೆಗಳಿಂದ ಸ್ವದೇಶೀ ಪ್ರಮುಖರು ಆಗಮಿಸಿದ್ದರು. ಫೆಡರಲ್ ನ್ಯಾಷನಲ್ ಕೌನ್ಸಿಲ್‌ನ ಮಾಜಿ ಉಪಾಧ್ಯಕ್ಷ ಶೈಖ್ ಸಾಲಿಂ ಮುಹಮ್ಮದ್ ರಕ್ಕಾಡ್ ಅಲ್ ಆಮಿರಿ ಅವರು ಎ.ಪಿ. ಉಸ್ತಾದರಿಗೆ ಸ್ನೇಹದ ಆಧರವನ್ನು ಹಸ್ತಾಂತರಿಸಿದರು.
ಕೇರಳ ಹಜ್ ಕಮಿಟಿ ಅಧ್ಯಕ್ಷ ಸಿ.ಮುಹಮ್ಮದ್ ಫೈಝಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಬುಧಾಬಿ ಆರ್ಥಿಕ ವಿಭಾಗದ ಡೈರೆಕ್ಟರ್ ಡಾ.ಅಲಿ ಅಲ್ ಹುಸ್ನಿ, ಅಡ್ನಾಕ್ ಡಿಸ್ಟ್ರಿಬೂಷನ್‌ನ ಸಿಆರ್‌ಒ ನಾಸರ್ ಅಲ್ ಹಮ್ಮಾದಿ, ಅಲ್ ಉತೈಬಾ ಹೋಲ್ಡಿಂಗ್‌ನ ಅಧ್ಯಕ್ಷರಾದ ಉತೈಬಾ ಅಲ್ ಉತೈಬಾ ಸಈದ್ ಅಲ್ ಉತೈಬಾ, ಮುಸ್ಲಿಂ ಕೌನ್ಸಿಲ್ ಆಫ್ ಎಲ್ಡೇರ್ಸ್ ಇವೆಂಟ್ ಕಾನ್ಫರೆನ್ಸ್ ನ ಮ್ಯಾನೇಜರ್ ರಾಷಿದ್ ಹಸನ್ ಅಲ್ ನುಐಮಿ, ದುಬೈ ಧಾರ್ಮಿಕ ಖಾತೆಯ ಮಾಜಿ ಡೈರೆಕ್ಟರ್ ಡಾ.ಸೈಫ್ ಅಲ್ ಜಾಬಿರಿ, ಯುಎಇಯ ಪ್ರಮುಖ ಬರಹಾಗಾರ, ಕವಿ ಅಹ್ಮದ್ ಇಬ್ರಾಹೀಂ ಅಲ್ ಹಮ್ಮಾದಿ, ವ್ಯವಹಾರ ಪ್ರಮುಖರಾದ ಮುಹಮ್ಮದ್ ರಾಶಿದ್ ಅಲ್ ಲಾಹಿರಿ, ಖಮೀಶ್ ರಾಶಿದ್ ಉಬೈದ್ ಅಲ್ ಮಹ್ಮರಿ, ಕೇರಳ ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಸೈಯದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ, ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ.ಅಬ್ದಲ್ ಹಕೀಂ ಅಝ್ಹರಿ, ಮರ್ಕಝ್ ಸಿಇಒ ಡಾ.ಅಬ್ದುಸ್ಸಲಾಂ, ಐಸಿಎಫ್ ನಾಷನಲ್ ಪ್ರೆಸಿಡೆಂಟ್ ಮುಸ್ತಫಾ ದಾರಿಮಿ ಕಾಡಂಗೋಡ್ ಮತ್ತಿತರರು ಮಾತನಾಡಿದರು.
ಸ್ವಾಗತ ಸಮಿತಿ ಚೈಯರ್ಮ್ಯಾನ್ ಡಾ.ಮುಹಮ್ಮದ್ ಖಾಸಿಂ ಸ್ವಾಗತಿಸಿದರು. ಐಸಿಎಫ್ ನ್ಯಾಷನಲ್ ಕಾರ್ಯದರ್ಶಿ ಶರೀಫ್ ಕಾರಶ್ಶೇರಿ ವಂದಿಸಿದರು.