ಉಳ್ಳಾಲ:ಚೆಂಬುಗುಡ್ಡೆ ಫ್ರೆಂಡ್ಸ್ ತಂಡದ ವತಿಯಿಂದ ನೂರುಲ್ ಹುದಾ ಮಸೀದಿ ವಠಾರದಲ್ಲಿ ಆದಿತ್ಯವಾರ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ನೂರುಲ್ ಹುದಾ ಮಸೀದಿ ಖತೀಬರು ದುಅ: ಮಾಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಚೆಂಬುಗುಡ್ಡೆ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಶಬೀರ್ ಚೆಂಬುಗುಡ್ಡೆ ಮಾತನಾಡಿ, ನಮ್ಮ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಸ್ವಚ್ಛ ಭಾರತ ಎಂಬ ಕಲ್ಪನೆಯನ್ನು ಮಹಾತ್ಮಾ ಗಾಂಧೀಜಿಯವರು ನಮಗೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲೇ ನೀಡಿದ್ದರು. ನಾವು ಪ್ರತಿ ವರ್ಷ ನೂರು ತಾಸು ಸ್ವಚ್ಛತೆಗಾಗಿ ಮೀಸಲಿಡಬೇಕು. ಆದರೆ ದಿನಕ್ಕೆ ಮೂರು ಗಂಟೆಯಾದರೂ ನಾವು ಸ್ವಚ್ಛತಾ ಕಾರ್ಯಕ್ರಮ ನಡೆಸಬೇಕು. ಕೇವಲ ನಮ್ಮ ಮನೆಯನ್ನು ಸ್ವಚ್ಛಗೊಳಿಸದರೆ ಸಾಲದು, ನಮ್ಮ ಸುತ್ತಮುತ್ತಲಿನ ಪರಿಸರವೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ದಿನದ ಒಂದಿಷ್ಟು ಸಮಯವನ್ನು ಮೀಸಲಿಡುವಂತೆ ಜನರನ್ನು ಪ್ರೇರೇಪಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಚೆಂಬುಗುಡ್ಡೆ ಫ್ರೆಂಡ್ಸ್ ತಂಡವು ಮಸೀದಿಯ ಧಫನ ಭೂಮಿಯಲ್ಲಿ ಬೆಳೆದಿದ್ದ ಹುಲ್ಲು ಗಿಡಗಳನ್ನು ಕತ್ತರಿಸಿ ದಫನ ಭೂಮಿಯನ್ನು ಸ್ವಚ್ಚಗೊಳಿಸಿದರು. ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಫ್ರೆಂಡ್ಸ್ ಚೆಂಬುಗುಡ್ಡೆ ತಂಡದ ಶಬೀರ್, ರಶೀದ್(ಮೋನು), ಶಂಶುದ್ದೀನ್, ಮುನೀರ್, ಅಸ್ಗರ್, ಅಮೀರ್, ರಿಜ್ಜು, ಜಾವೇದ್, ಇಸಾಕ್, ಅನ್ಸಾರ್,ಜುನ್ನಿ ಇವರೊಂದಿಗೆ ನಮ್ಮ ಹಿಂದೂ ಸಹೋದರರಾದ ಪ್ರವೀಣಾ(ಅಬ್ಬು), ರಕ್ಷಿತ್ ತಂಡದೊಂದಿಗೆ ಕೈ ಜೋಡಿಸಿ ಸಹೋದರತ್ವ ಸಾರುವ ರೀತಿಯಲ್ಲಿ ಮಸೀದಿಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.