ನವದೆಹಲಿ: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಸ್ಫೋಟಗಳನ್ನು ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಖಂಡಿಸಿದ್ದಾರೆ.
Strongly condemn the horrific blasts in Sri Lanka. There is no place for such barbarism in our region. India stands in solidarity with the people of Sri Lanka. My thoughts are with the bereaved families and prayers with the injured.— Chowkidar Narendra Modi (@narendramodi) April 21, 2019
ಲೋಕಸಭಾ ಚುನಾವಣೆ ಪ್ರಚಾರದಲ್ಲಿರುವ ಅವರು ಮಧ್ಯಾಹ್ನ ಟ್ವೀಟ್ ಮಾಡಿ, ‘ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಸ್ಫೋಟಗಳನ್ನು ಖಂಡಿಸುತ್ತೇನೆ. ಇಂತಹ ಕ್ರೌರ್ಯಕ್ಕೆ ನಮ್ಮ ಪ್ರದೇಶದಲ್ಲಿ ಆಸ್ಪದವಿಲ್ಲ. ಶ್ರೀಲಂಕಾದ ಜನತೆ ಜತೆ ಭಾರತವಿದೆ. ಘಟನೆಗೆ ನನ್ನ ಸಂತಾಪಗಳು. ಗಾಯಾಳುಗಳ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ಬರೆದಿದ್ದಾರೆ.
‘ಶ್ರೀಲಂಕಾದಲ್ಲಿ ನಡೆದ ಉಗ್ರ ದಾಳಿಯನ್ನು ಭಾರತ ಖಂಡಿಸುತ್ತದೆ. ಮುಗ್ಧ ಜನರನ್ನು ಗುರಿಯಾಗಿಸಿ ನಡೆಸುವ ಇಂತಹ ಪ್ರಜ್ಞಾಶೂನ್ಯ ಹಿಂಸಾಚಾರಕ್ಕೆ ನಾಗರಿಕ ಸಮಾಜದಲ್ಲಿ ಜಾಗವಿಲ್ಲ. ಶ್ರೀಲಂಕಾದ ಜತೆ ನಾವಿದ್ದೇವೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.
India condemns the terror attacks in Sri Lanka and offers its condolences to the people and government of the country. Such senseless violence, aimed at innocent people, has no place in civilised society. We stand in complete solidarity with Sri Lanka #PresidentKovind— President of India (@rashtrapatibhvn) April 21, 2019
ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ, “ಕೊಲೊಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ವಾರ್ತೆ ಕೇಳಿ ನಾನು ತೀವ್ರ ದುಃಖಿತ ನಾಗಿದ್ದೇನೆ. ಸ್ಪೋಟದದ್ದಲ್ಲಿ 100 ಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದು, 300 ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ.ನಾನು ಈ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತಿದ್ದೇನೆ ಘಟನೆಯಲ್ಲಿ ಬಲಿಯಾದವರ ಕುಟುಂಬಗಳಿಗೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ”ಎಂದಿದ್ದಾರೆ
I’m saddened & disturbed by reports of multiple bomb blasts in #Colombo in which over 100 people have died & more than 300 injured.
I strongly condemn this diabolical act of terrorism.
My condolences to the families of the victims. I pray the injured make a speedy recovery.— Rahul Gandhi (@RahulGandhi) April 21, 2019
ಇನ್ನೊಂದೆಡೆ ಭಾರತದ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಭಾರತವು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ಹೇಳಿದ್ದಾರೆ. ಈಗಾಗಲೇ ಕೊಲೊಂಬೋದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಅಲ್ಲಿನ ಭಾರತೀಯ ನಾಗರಿಕರಿಗಾಗಿ ಸಹಾಯವಾಣಿ ನಂಬರ್ ಗಳನ್ನು ಘೋಷಿಸಿದೆ.
Colombo – I am in constant touch with Indian High Commissioner in Colombo. We are keeping a close watch on the situation. @IndiainSL— Chowkidar Sushma Swaraj (@SushmaSwaraj) April 21, 2019
ಈ ಸಂಖ್ಯೆಗಳು: +94777903082, +94112422788, +94112422789, +94777902082 ಮತ್ತು +94772234176.
ಭಾನುವಾರ ಬೆಳಿಗ್ಗೆ ಶ್ರೀಲಂಕಾದ ಮೂರು ಚರ್ಚ್, ಎರಡು ಐಷಾರಾಮಿ ಹೋಟೆಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ 185 ಮಂದಿ ಮೃತಪಟ್ಟಿದ್ದು, ಸುಮಾರು 400 ಜನ ಗಾಯಗೊಂಡಿದ್ದಾರೆ. ಮೃತರ ಪೈಕಿ 35 ಜನ ಹೊರ ರಾಷ್ಟ್ರದವರು ಎನ್ನಲಾಗಿದೆ.