ನವದೆಹಲಿ: ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನಿರಾಕರಿಸಿದ್ದಾರೆ. ಮತ್ತು ಸುಪ್ರೀಂಕೋರ್ಟ್ ಮಾಜಿ ಸಿಬ್ಬಂದಿ ನೀಡಿರುವ ದೂರು ಮುಖ್ಯನ್ಯಾಯಮೂರ್ತಿ ಕಚೇರಿ ಮೇಲೆ ಆಕ್ರಮ ಮಾಡಲು ಹಾಗೂ ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯದ ವಿರುದ್ಧ ಕೂಡಿದ ಸಂಚಿನ ದೂರಾಗಿದೆ,” ಎಂದು ವಿವರಿಸಿದರು.
ಸುಪ್ರೀಂಕೋರ್ಟ್ ಮಾಜಿ ಸಿಬ್ಬಂದಿಯೊಬ್ಬರು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಂತರ ಶನಿವಾರ ಬೆಳಗ್ಗೆ ಸುಪ್ರೀಂಕೋರ್ಟ್ ವಿಶೇಷ ವಿಚಾರಣೆ ನಡೆಸಿತು.
“ನ್ಯಾಯಮೂರ್ತಿ ಸ್ಥಾನಕ್ಕಿಂತ ಹೆಚ್ಚು ಮೌಲ್ಯಯುತವಾದದ್ದು ಯಾವುದೂ ಇಲ್ಲ. ಸ್ವಾತಂತ್ರ್ಯ ನ್ಯಾಯಾಂಗ ವ್ಯವಸ್ಥೆ ತುಂಬಾ ತುಂಬಾ ಗಂಭೀರ ಬೆದರಿಕೆಯಲ್ಲಿದೆ. ನ್ಯಾಯಮೂರ್ತಿಗಳು ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಿದೆ. ಒಳ್ಳೆಯ ಜನರು ಈ ಕಚೇರಿಗೆ ಬರಲೇಬಾರದು,” ಎಂದು ನ್ಯಾ.ಗೋಗೊಯ್ ವಿಷಾದ ವ್ಯಕ್ತಪಡಿಸಿದ್ದಾರೆ.
ಮುಖ್ಯನ್ಯಾಯಮೂರ್ತಿ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಈ ವಿಚಾರಣೆ ನಡೆದಿದೆ. “ಈ ಆರೋಪವು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ತುಂಬಾ ಗಂಭೀರ ಬೆದರಿಕೆಯನ್ನು ತೋರಿಸುತ್ತದೆ,” ಎಂದು ನ್ಯಾ.ಗೋಗೊಯ್ ಹೇಳಿದರು.
ಆರೋಪ ಕುರಿತಾಗಿ ಪೀಠ ಯಾವುದೇ ಆದೇಶ ನೀಡಿಲ್ಲ. ಮುಖ್ಯನ್ಯಾಯಮೂರ್ತಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪ ಸಂಬಂಧ ಹಿರಿಯ ನ್ಯಾಯಮೂರ್ತಿಗಳ ವಿಚಾರಣೆ ವೇಳೆ ಸ್ಪಷ್ಟೀಕರಣ ನೀಡಲಿದ್ದಾರೆ.
“ನ್ಯಾಯಾಂಗ ವ್ಯವಸ್ಥೆ ತುಂಬಾ ಗಂಭೀರ ಬೆದರಿಕೆ ಎದುರಿಸುತ್ತಿದೆ. ಒಳ್ಳೆಯ ಜನರು ನ್ಯಾಯಮೂರ್ತಿಗಳಾಗಬಾರದು. ಒಂದು ವೇಳೆ ಆದರೆ, ಹೀಗೆ ಗುರಿಗೆ ಈಡಾಗಬೇಕಾಗುತ್ತದೆ. ನನಗೆ ಗೌರವಕ್ಕಿಂತ ಹೆಚ್ಚು ಮೌಲ್ಯಯುತವಾದದ್ದು ಬೇರೆ ಯಾವುದೂ ಇಲ್ಲ. ಮತ್ತು ಉನ್ನತ ಸ್ಥಾನದಲ್ಲಿರುವ ನಾನು ಇದನ್ನು ಹೇಳುವುದಕ್ಕಾಗಿ ಈ ಪೀಠ ರಚಿಸಿದೆ,” ಎಂದು ನ್ಯಾ.ಗೋಗೊಯ್ ಕರೆಯಲಾಗಿದ ತುರ್ತು ವಿಚಾರಣೆ ವೇಳೆ ಹೇಳಿದರು.
ಇದರ ಹಿಂದೆ ದೊಡ್ಡ ಪಡೆಯೇ ಇದೆ. ಅವರಿಗೆ ಮುಖ್ಯನ್ಯಾಯಮೂರ್ತಿ ಕಚೇರಿ ನಿಷ್ಕ್ರಿಯಗೊಳ್ಳುವುದುಬೇಕಿದೆ,” ಎಂದು ನ್ಯಾ.ಗೋಗೊಯ್ ಹೇಳಿದರು.
20 ವರ್ಷಗಳಿಂದ ನಾನು ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಬ್ಯಾಂಕ್ ಖಾತೆಯಲ್ಲಿ 6.80 ಲಕ್ಷ ಹಣವಿದೆ. ನನ್ನ ಕಚೇರಿಯ ಜವಾನ ನನಗಿಂತಲೂ ಹೆಚ್ಚಿನ ಆಸ್ತಿ ಮತ್ತು ಹಣ ಹೊಂದಿದ್ದಾರೆ,” ಎಂದು ನ್ಯಾ.ಗೋಗೊಯ್ ತಿಳಿಸಿದರು.
ಪೀಠದಲ್ಲಿ ಇದ್ದ ನ್ಯಾ,ಅರುಣ್ ಮಿಶ್ರಾ ಮತ್ತು ನ್ಯಾ.ಸಂಜೀವ್ ಖನ್ನಾ ಅವರು, ಒಂದು ವೇಳೆ ನ್ಯಾಯಾಧೀಶರು ದಾಳಿ ನಡೆಸಿದರೆ ನ್ಯಾಯಾಲಯ ಕಾರ್ಯನಿರ್ವಹಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
“ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಹೊಂದಿದ್ದಾರೆ. ಇಂತಹ ನಿರ್ಲಜ್ಜ ಆರೋಪಗಳು ನ್ಯಾಯಾಂಗ ವ್ಯವಸ್ಥೆ ಮೇಲೆ ಜನರು ಹೊಂದಿರುವ ನಂಬಿಕೆಯನ್ನು ಘಾಸಿಗೊಳಿಸಿಬಿಡಬಹುದು,” ಎಂದು ನ್ಯಾ.ಮಿಶ್ರಾ ಹೇಳಿದರು.