janadhvani

Kannada Online News Paper

ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ನಿಗೂಢ ಸಾವು-ಶಂಕಿತ ಆರೋಪಿ ಬಂಧನ

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌. ಬಂಧಿತನನ್ನು ಸುದರ್ಶನ ಯಾದವ್ (26) ಎಂದು ಗುರುತಿಸಲಾಗಿದೆ.

ಬಂಧಿತನ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದು, ಮತ್ತೊಂದೆಡೆ ಮೃತಳ ಶವದ ಮರಣೋತ್ತರ ಹೆಚ್ಚುವರಿ ಪರೀಕ್ಷೆಗೆ ಕಲಬುರಗಿಗೆ ದೇಹದ ಕೆಲ ಭಾಗದ ಮಾದರಿ ಕಳಿಸಿಕೊಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿ ಮಧು ಪತ್ತಾರ್ ಶವ ಅನುಮಾನಾಸ್ಪದ ರೀತಿಯಲ್ಲಿ ನಗರದ ಉಸುಕಿನ ಹುನುಮಾನ್ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಸುಟ್ಟ ಗಾಯಗಳಿಂದ ಕೂಡಿದ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸರಿಗೆ ಪತ್ತೆಯಾಗಿತ್ತು. ಪೋಲೀಸರು ಇದನ್ನು ಆತ್ಮಹತ್ಯೆ ಕೇಸ್ ಎಂದು ದಾಖಲಿಸಿಕೊಂಡಿದ್ದು ಮೃತಳ ಪಾಲಕರು ಇದೊಂದು ಕೊಲೆ ಎಂದು ನೇತಾಜಿ ನಗರ ಠಾಣೆಗೆ ದೂರಿತ್ತಿದ್ದಾರೆ.

ಪ್ರಕರಣದ ವಿಚಾರಣೆ ಚುರುಕುಗೊಳಿಸಿರುವ ಪೊಲೀಸರು ಗುರುವಾರ ರಾತ್ರಿ ಶಂಕಿತ ಆರೋಪಿ ಸುದರ್ಶನ ಯಾದವ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನೆಟ್ಟಿಗರಿಂದ ಆಕ್ರೋಶ

ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅನುಮಾನಗಳು ವ್ಯಕ್ತವಾಗಿದ್ದರು, ಮಧು ಪತ್ತಾರ ಅನುಮಾನಸ್ಪದ ಸಾವನ್ನು ಮಾಧ್ಯಮ ನಿರ್ಲಕ್ಷಿಸುತ್ತಿದೆ ಎಂದು ಸಾಮಾಜಿಕ ತಾಣಗಳಲ್ಲಿ ನೆಟ್ಟಿನಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.