janadhvani

Kannada Online News Paper

ವಿಶ್ವ ಪತ್ರಿಕಾ ಸ್ವಾತಂತ್ರ ಸೂಚ್ಯಂಕ: ಭಾರತ 140 ನೇ ಸ್ಥಾನಕ್ಕೆ ಕುಸಿತ

ನವದೆಹಲಿ: ಈಗ ದೇಶದಲ್ಲೆಡೆ ಲೋಕಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ ಸೂಚಂಕ್ಯ ಬಿಡುಗಡೆಯಾಗಿದೆ. ಆದರೆ ಭಾರತ ಈಗ ಸೂಚ್ಯಂಕದಲ್ಲಿ ಕುಸಿತ ಕಂಡಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಎನ್ನುವ ಸಂಸ್ಥೆ ಬಿಡುಗಡೆ ಮಾಡಿರುವ ಸೂಚ್ಯಂಕದಲ್ಲಿ ಒಟ್ಟು 180 ದೇಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ ನಾರ್ವೆ ದೇಶವು ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ.ಭಾರತ 140ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಆ ಮೂಲಕ ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.ಭಾರತದಲ್ಲಿ ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ದಾಳಿಯಿಂದಾಗಿ ಕಳೆದ ವರ್ಷ 6 ಪತ್ರಕರ್ತರು ಮೃತಪಟ್ಟಿದ್ದರು.ಈ ಹಿನ್ನಲೆಯಲ್ಲಿ ಭಾರತ ಸೂಚ್ಯಂಕದಲ್ಲಿ ಕುಸಿದಿದೆ ಎನ್ನಲಾಗಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ ಸೂಚ್ಯಂಕ ತನ್ನ ಪ್ರಕಟನೆಯಲ್ಲಿ ತಿಳಿಸಿರುವಂತೆ “ಪೊಲೀಸ್ ಹಿಂಸಾಚಾರ, ಮಾವೋವಾದಿ ಹೋರಾಟಗಾರರು ಮತ್ತು ಕ್ರಿಮಿನಲ್ ಗುಂಪುಗಳು ಅಥವಾ ಭ್ರಷ್ಟ ರಾಜಕಾರಣಿಗಳ ಪ್ರತೀಕಾರದಿಂದಾಗಿ ಪತ್ರಕರ್ತರ ಮೇಲೆ ಹಿಂಸಾಚಾರದಂತಹ ಘಟನೆಗಳು ಹೆಚ್ಚಿದ್ದು, ಇವು ಪ್ರಮುಖವಾಗಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ ಕುಸಿಯುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ” ಎಂದು ಸೂಚಂಕ್ಯ ತಿಳಿಸಿದೆ.

error: Content is protected !! Not allowed copy content from janadhvani.com