ರಿಯಾದ್: ಸೌದಿ ಅರೇಬಿಯಾಕ್ಕೆ ಸಂದರ್ಶನ ವಿಸಾದಲ್ಲಿ ಭೇಟಿ ನೀಡುವ ವಿದೇಶಿ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ಸಲಾಮತಕ್ ವೈದ್ಯಕೀಯ ಕೇಂದ್ರವು ಕಾರ್ಯಾಚರಿಸಲಿದೆ.
ಸೌದಿ ಅರೇಬಿಯಾದ ದಕ್ಷಿಣ ಪ್ರಾಂತ್ಯದ ಸ್ಥಾಪನೆಗಳಲ್ಲಿ ಕಾರ್ಯಾಚರಿಸುವ ಎಲ್ಲಾ ವೈದ್ಯರು ಉಚಿತ ಸೇವೆ ನೀಡಲಿದ್ದಾರೆ. ಯೋಜನೆಯು ಸಂಸ್ಥೆಯ ಸಾಮಾಜಿಕ ಕಳಕಳಿಯ ಭಾಗವಾಗಿದೆ.
ಸಂದರ್ಶನ ವೀಸಾದಲ್ಲಿರುವ ತಂಡ ಈ ಸೇವೆಯನ್ನು ಬಳಸಿಕೊಳ್ಳುವಂತೆ ನಿರ್ವಹಣಾ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಂಸ್ಥೆಯಲ್ಲಿ ನೋಂದಾಯಿಸಲಾದ ವೀಸಾದಲ್ಲಿರುವ ಕುಟುಂಬದವರಿಗೆ ಮಾತ್ರ ಯೋಜನೆಯ ಲಾಭ ಪಡಕೊಳ್ಳಬಹುದಾಗಿದೆ.