janadhvani

Kannada Online News Paper

“ಫಿರ್ ಏಕ್ ಬಾರ್ ಮೋದಿ ಸರ್ಕಾರ್” ಬಿಜೆಪಿಯ ಚುನಾವಣಾ ಘೋಷಣೆ

ನವದೆಹಲಿ: ಬಿಜೆಪಿಯ ಚುನಾವಣಾ ಗೀತೆ ಮತ್ತು ಘೋಷಣೆಯನ್ನು ಕೇಂದ್ರ ವಿತ್ತ ಸಚಿವ ಮತ್ತು ಬಿಜೆಪಿ ಹಿರಿಯ ನೇತಾರ ಅರುಣ್ ಜೇಟ್ಲಿ ಭಾನುವಾರ ಬಿಡುಗಡೆ ಮಾಡಿದ್ದಾರೆ.

ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎಂಬುದು ಬಿಜೆಪಿಯ ಘೋಷಣೆ ಆಗಿದೆ, ಕಳೆದ ಐದು ವರ್ಷದಲ್ಲಿ ಮೋದಿಯರ ಸಾಧನೆಯನ್ನು ಮುಂದಿರಿಸಿ ಈ ಬಾರಿ ಬಿಜೆಪಿ ಮತಯಾಚಿಸಲಿದೆ. ಪಕ್ಷದ ಚುನಾವಣಾ ಜತೆಗೆ ಚಿಕ್ಕ ವಿಡಿಯೊ ಮತ್ತು ರಿಂಗ್ ಟೋನ್‍ ಕೂಡಾ ಬಿಡುಗಡೆ ಮಾಡಲಾಗಿದೆ.