ಯುದ್ಧೋನ್ಮಾದದ ಚಾಟಿ ಬೀಸಿ ಚುನಾವಣೆ ಗೆಲ್ಲುವ ಮೋದಿ ಪ್ರಯತ್ನಕ್ಕೆ ಹಿನ್ನಡೆ-ಇಮ್ರಾನ್ ಖಾನ್

ಇಸ್ಲಾಮಾಬಾದ್, ಏ 7 – ಪಾಕಿಸ್ತಾನದ ವಿರುದ್ಧ ಯುದ್ಧೋನ್ಮಾದದ ಚಾಟಿ ಬೀಸಿ ಚುನಾವಣೆ ಗೆಲ್ಲುವ ಪ್ರಯತ್ನ ಹಾಗೂ ಎಫ್-16 ಜೆಟ್ ಯುದ್ಧ ವಿಮಾನವನ್ನು ಧ್ವಂಸಗೊಳಿಸಿದ್ದೇವೆ ಬಿಜೆಪಿ ಸುಳ್ಳು ಹೇಳಿಕೆಗೆ ಹಿನ್ನಡೆಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಎಫ್-16 ಜೆಟ್ ಯುದ್ಧ ವಿಮಾನ ಧ್ವಂಸಗೊಳಿಸಿದ್ದೇವೆ ಎಂಬ ಭಾರತದ ಹೇಳಿಕೆಗೆ ಪ್ರತಿಕ್ರಯಿಸಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ” ಪಾಕಿಸ್ತಾನದ ನೌಕಾಬಲದಿಂದ ಯಾವುದೇ ಎಫ್-16 ಜೆಟ್ ಯುದ್ಧ ವಿಮಾನ ಪತನಗೊಂಡಿಲ್ಲ ಎಂದು ಅಮೆರಿಕದ ಅಧಿಕಾರಿಗಳು ದೃಢಪಡಿಸಿದ್ದಾರೆ.” ಎಂದು ಹೇಳಿದ್ದಾರೆ.

“ಸತ್ಯ ಯಾವಾಗಲೂ ಮುಂದುವರಿಯುತ್ತದೆ ಹಾಗೂ ಇದು ಯಾವಾಗಲೂ ಉತ್ತಮ ನೀತಿಯಾಗಿದೆ. ಅಮೆರಿಕದ ಅಧಿಕಾರಿಗಳು ನಾವು ಪಾಕಿಸ್ತಾನಕ್ಕೆ ನೀಡಿದ ಯಾವುದೇ ಎಫ್-16 ಯುದ್ಧ ವಿಮಾನ ಪತನಗೊಂಡಿಲ್ಲ ಎಂದು ದೃಢಪಡಿಸಿದ್ದಾರೆ. ಇದರಿಂದ ಯುದ್ಧೋನ್ಮಾದದ ಚಾಟಿ ಬೀಸಿ ಚುನಾವಣೆ ಗೆಲ್ಲುವ ಹಾಗೂ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಧ್ವಂಸಗೊಳಿಸಿದ್ದೇವೆ ಎಂಬ ಬಿಜೆಪಿಯ ಸುಳ್ಳು ಹೇಳಿಕೆಗೆ ಹಿನ್ನಡೆಯಾಗಿದೆ.” ಎಂದು ಖಾನ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಎಫ್-16 ಜೆಟ್ ಯುದ್ಧ ವಿಮಾನ ಹೊಡೆದುರುಳಿಸಿದ್ದೇವೆ ಎಂಬ ಭಾರತದ ಸಮರ್ಥನೀಯ ಹೇಳಿಕೆ ಬೆನ್ನಲ್ಲೇ, ನಾವು ಪಾಕಿಸ್ತಾನಕ್ಕೆ ನೀಡಿದ ಎಫ್ -16 ಜೆಟ್ ಯುದ್ಧ ವಿಮಾನವನ್ನು ಹೊಡೆದೂರಿಳಿಸಿದ್ದೇವೆ ಎಂಬ ಭಾರತದ ಹೇಳಿಕೆ ಸುಳ್ಳು ಎಂದು ಅಮೆರಿಕ ದೃಢಪಡಿಸಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಪ್ರತಿಕ್ರಯಿಸಿದ್ದಾರೆ.

ಆದರೆ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತಮ್ಮ ವಿಮಾನ ಪತನವಾಗುವುದಕ್ಕೂ ಮುನ್ನ ಎಂಐಜಿ-21 ಬೈಸನ್ ನಿಂದ ಅಮೆರಿಕ ಪೂರೈಸಿದ ಪಾಕಿಸ್ತಾನದ ಎಫ್-16 ಜೆಟ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತೀಯ ವಾಯುಪಡೆ ಸಮರ್ಥಿಸಿಕೊಂಡಿದ್ದು, ಯುಎಸ್ ಮ್ಯಾಗಜಿನ್ ಹೇಳಿಕೆಯನ್ನು ತಳ್ಳಿ ಹಾಕಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೌಶೇರಾ ಸೆಕ್ಟರ್ ನಲ್ಲಿ ವೈಮಾನಿಕ ದಾಳಿ ನಡೆಸುವ ವೇಳೆ ಪಾಕಿಸ್ತಾನದ ವಾಯುಪಡೆಯ ಎಫ್-16 ಜೆಟ್ ಯುದ್ಧ ವಿಮಾನ ಪತನಗೊಂಡಿರುವುದಕ್ಕೆ ವಿದ್ಯುನ್ಮಾನ ಸಹಿಯೇ ಸಾಕ್ಷಿ ಎಂದು ಭಾರತೀಯ ವಾಯುಪಡೆ ಹೇಳಿದೆ.

One thought on “ಯುದ್ಧೋನ್ಮಾದದ ಚಾಟಿ ಬೀಸಿ ಚುನಾವಣೆ ಗೆಲ್ಲುವ ಮೋದಿ ಪ್ರಯತ್ನಕ್ಕೆ ಹಿನ್ನಡೆ-ಇಮ್ರಾನ್ ಖಾನ್

  1. ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ರಕ್ಷಣಾ ಸಚಿವ ರ, ಭಾರತ ದ ಬಗ್ಗೆ ಇರುವ ಪ್ರತಿಯೊಂದು ವಾಕ್ಯಗಳಿಗೆ, ಬೇಕಾದಷ್ಟು ಬಹುಮಾನಗಳು ಸಿಗ್ತಾ ಇದೆ.. ಅನ್ನಬೇಕು..

    ಮೇ 23 ರ ತನಕ ಇಮ್ರಾನ್ ಖಾನ್ ಇಂತಹ ಮಾತುಕತೆಯಲ್ಲಿ ನಿರತರಾಗಿರುತ್ತಾರೆ .. ನೋಡಿ

Leave a Reply

Your email address will not be published. Required fields are marked *

error: Content is protected !!