janadhvani

Kannada Online News Paper

ಇಂಡೋನೇಷ್ಯಾ ಅಂತಾರಾಷ್ಟ್ರೀಯ ಉಲಮಾ ಸಮ್ಮೇಳನ: ಇಂಡಿಯನ್ ಗ್ರಾಂಡ್ ಮುಫ್ತಿ ಮುಖ್ಯ ಅತಿಥಿ

ಕೋಝಿಕೋಡ್: ಇಂಡೋನೇಷ್ಯಾದ ರಕ್ಷಣಾ ಸಚಿವಾಲಯ ಮತ್ತು ಇಂಡೋನೇಶಿಯಾದ ಅತೀ ದೊಡ್ಡ ಮುಸ್ಲಿಂ ಸಂಘಟನೆಯಾದ ಸೂಫಿ ಫೋರಂ ಜಂಟಿಯಾಗಿ ಹಮ್ಮಿಕೊಂಡಿರುವ ಅಂತರ್‌ರಾಷ್ಟ್ರೀಯ ಮುಸ್ಲಿಂ ವಿದ್ವಾಂಸರ ಸಮ್ಮೇಳನದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸೋಮವಾರ ಸೆಂಟ್ರಲ್ ಜಾವದಲ್ಲಿ ನಡೆಯುವ ತ್ರಿದಿನ ಸಮಾವೇಶದಲ್ಲಿ ಮಾನವ ಸಂತೋಷ ಉಳಿಸುವ ಮತ್ತು ರಾಷ್ಟ್ರಗಳನ್ನು ರಕ್ಷಿಸುವಲ್ಲಿ ಸೂಫೀಝಂನ ಪಾತ್ರ ಎಂಬ ವಿಷಯದಲ್ಲಿ ಕಾಂತಪುರಂ ಉಪನ್ಯಾಸ ನೀಡಲಿದ್ದಾರೆ.

ವಿಶ್ವದ ವಿವಿಧ ಖಂಡಗಳ 53 ದೇಶಗಳಿಂದ ನೂರು ಧಾರ್ಮಿಕ ಪಂಡಿತರು ಮತ್ತು ವಿಶ್ವದ ಶ್ರೇಷ್ಠ 35 ದೇಶಗಳ ರಾಜ್ಯಪಾಲರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇಂಡೋನೇಶಿಯನ್ ರಕ್ಷಣಾ ಸಚಿವ ರಮಿದಾಸ್ ರಾಕ್ಕುಡು ಧಾರ್ಮಿಕ ಖಾತೆಯ ಸಚಿವ, ಲುಕ್ಮಾನ್ ಸೈಫುದ್ದೀನ್ ಭಾಗವಹಿಸಲಿರುವರು.

ವಿಶ್ವದಲ್ಲಿ ಮೇಳೈಸುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಇಸ್ಲಾಮ್ ಪ್ರತಿಪಾದಿಸುವ ವಿವಿಧ ಮಾದರಿಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಮರ್ಕಝ್‌ನ ನಿರ್ದೇಶಕ ಡಾ.ಎ.ಪಿ.ಅಬ್ದುಲ್ ಹಕೀಮ್ ಅಝ್ಹರಿ ಅವರು ಕಾಂತಪುರಂ ಉಸ್ತಾದರನ್ನು ಅನುಗಮಿಸಲಿದ್ದಾರೆ.

ಕಾಂತಪುರಂ ಉಸ್ತಾದರು ಮಲೇಷಿಯಾ, ಸಿಂಗಪುರಗಳಲ್ಲಿಯೂ ಪರ್ಯಟನೆ ನಡೆಸಲಿದ್ದಾರೆ. ಸಿಂಗಪುರ ನಗರದಲ್ಲಿನ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ಇಂಡಿಯನ್ ಗ್ರಾಂಡ್ ಮುಫ್ತಿಯವರಿಗೆ ಅಭಿನಂದನಾ ಸಭೆ ಜರುಗಲಿದೆ.

error: Content is protected !! Not allowed copy content from janadhvani.com