ಅಬುಧಾಬಿ: ಭಾರತೀಯ ವಿಶ್ವವಿದ್ಯಾನಿಲಯಗಳು ನೀಡುವ ಬಿರುದುಗಳಿಗೆ ಸಮಾನತೆಯನ್ನು ನೀಡಲು ಯುಎಇ ಸಚಿವಾಲಯವು ನಿರ್ಧರಿಸಿದೆ. ಯುಎಇಯ ಮಾನದಂಡಗಳನ್ನು ಒಪ್ಪುವ, ಡಿಗ್ರಿ ಪ್ರಮಾಣಪತ್ರಗಳನ್ನು ಯುಎಇನಲ್ಲಿ ಅಂಗೀಕರಿಸಲಾಗುತ್ತದೆ. ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಈ ಬಗ್ಗೆ ಸುದ್ದಿಗಾರರೊಂದಿಗೆ ತಿಳಿಸಿದರು.
ಈ ಹಿಂದೆ ಭಾರತೀಯ ವಿಶ್ವವಿದ್ಯಾಲಯಗಳು ನೀಡುವ ಸರ್ಟಿಫಿಕೇಟ್ ನಲ್ಲಿನ ಆಂತರಿಕ ಮತ್ತು ಬಾಹ್ಯ(internal, external) ಅಂಕಗಳ ನಡುವಿನ ಅಂತರದಿಂದಾಗಿ ವಿವಾದ ಉಂಟಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ದೂತಾವಾಸದ ವಿವರಣೆಯನ್ನು ಯುಎಇ ಆರೋಗ್ಯ ಸಚಿವಾಲಯ ಅಂಗೀಕರಿಸಿದ್ದು, ವಿವಾದ ಬಗೆಹರಿದಿದೆ. ಇದರೊಂದಿಗೆ, ಭಾರತದ ವೃತ್ತಿಪರ ಮತ್ತು ಶೈಕ್ಷಣಿಕ ಪದವಿಗಳನ್ನು ಯುಎಇನಲ್ಲಿ ಸಮಾನವೆಂದು ಗುರುತಿಸಲಾಗುತ್ತದೆ.
ಪ್ರಮಾಣಪತ್ರಗಳ ಗೊಂದಲಗಳಿಂದಾಗಿ, ಅನೇಕ ಜನರು ಕೆಲಸಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಅಧ್ಯಾಪಕ ವೃತ್ತಿಯಲ್ಲಿರುವ ಉದ್ಯೋಗಿಗಳು ತೊಂದರೆಗೊಳಗಾದಾಗ ಭಾರತೀಯ ದೂತಾವಾಸವು ಮಧ್ಯಪ್ರವೇಶಿಸಿತು.
ಯು.ಜಿ.ಸಿಯ ‘ಆಕ್ಷನ್ ಪ್ಲಾನ್ ಫಾರ್ ಅಕಾಡೆಮಿಕ್ ಆ್ಯಂಡ್ ಅಡ್ಮಿನಿಸ್ಟ್ರೇಟೀವ್ ರಿಫಾರ್ಮ್ಸ್’ ಅನ್ನು ಪರಿಶೋಧನೆಗೊಳಪಡಿಸಿ ಯುಎಇ ವಿದ್ಯಾಭ್ಯಾಸ ಸಚಿವಾಲವು ಈ ತೀರ್ಮಾನಕ್ಕೆ ಬಂದಿದೆ. ಮಾರ್ಕ್ ಲಿಸ್ಟ್ ಗಳಲ್ಲಿರುವ ‘ಬಾಹ್ಯ’ ಎಂಬ ಶಬ್ದವು ಮೌಲ್ಯ ನಿರ್ಣಯ ರೀತಿಯನ್ನಷ್ಟೇ ಸೂಚಿಸುತ್ತಿದ್ದು, ಅದು ಕಲಿಕೆಯ ಸ್ಥಾನವನ್ನು ಸೂಚಿಸುವುದಿಲ್ಲ ಎಂದು ಭಾರತೀಯ ದೂತಾವಾಸವು ಯುಎಇಗೆ ಮನವರಿಕೆ ಮಾಡುವಲ್ಲಿ ಸಫಲವಾಯಿತು. ಆ ಮೂಲಕ ಸಮಾನತೆಯನ್ನು ನೀಡಲು ನಿರ್ಧಾರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.