ಟುನಿಷ್ಯಾ: ಇಸ್ರೇಲಿನ ರಾಜಧಾನಿಯಾಗಿ ಕುದ್ಸ್ (ಜೆರುಸಲೇಂ)ಗೆ ಅಮೆರಿಕ ಸಹಿತ ಕೆಲವು ದೇಶಗಳು ನೀಡಿರುವ ಅಂಗೀಕಾರವನ್ನು ಮತ್ತು ಜೂಲಾನ್ ಬೆಟ್ಟಗಳ ಮೇಲೆ ಇಸ್ರೇಲಿನ ಪರಮಾಧಿಕಾರವನ್ನು ಒಪ್ಪಬೇಕೆಂದು ಅಮೆರಿಕ ನೀಡಿದ ನಿರ್ದೇಶವನ್ನು ಸೌದಿ ಅರೇಬಿಯ ಮತ್ತು ಅರಬ್ ಲೀಗ್ ಪುನಃ ತಿರಸ್ಕರಿಸಿವೆ.
ಸೌದಿ ಅರೇಬಿಯದ ವಿದೇಶ ಸಚಿವ ಡಾ. ಇಬ್ರಾಹೀಂ ಅಲ್ ಅಸ್ಸಾಫ್ ಟ್ರಂಪ್‍ರ ನಿರ್ದೇಶಕ್ಕೆ ವಿರೋಧ ವ್ಯಕ್ತಪಡಿಸಿ ಅರಬ್ ಶೃಂಗದ ವಿದೇಶ ಸಚಿವರ ಸಭೆಯಲ್ಲಿ ಮಾತನಾಡುತ್ತಿದ್ದರು. ಅಂತಾರಾಷ್ಟೀಯ ಒಪ್ಪಂದ ಪ್ರಕಾರ ಜೂಲನ್ ಬೆಟ್ಟಗಳು ಸಿರಿಯಕ್ಕೆ ಸೇರಿವೆ. ಸೌದಿ ಅರೇಬಿಯ ಈ ನಿಲುವಿನಲ್ಲಿ ದೃಢವಾಗಿದೆ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅಮೆರಿಕದ ನಿಲುವಿನಿಂದ ಸತ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ವಿದೇಶ ಸಚಿವರು ಹೆಳಿದರು.
ಸಿರಿಯ, ಯಮನ್‍ಗಳಲ್ಲಿ ಚರ್ಚೆಯ ಮೂಲಕ ಒಗ್ಗಟ್ಟು ತರಬೇಕಾಗಿದೆ. ಜೂಲಾನ್ ಬೆಟ್ಟಗಳ ಮೇಲೆ ಇಸ್ರೇಲಿಗೆ ಪರಮಾಧಿಕಾರವೆನ್ನುವ ಅಮೆರಿಕದ ನಿರ್ಧಾರವನ್ನು ಗಲ್ಫ್ ದೇಶಗಳೆಲ್ಲ ತಿರಸ್ಕರಿಸಿವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಆಫ್ರಿಕದ ದೇಶವಾದ ಟುನಿಷ್ಯ ಕೂಡ ಹೇಳಿದೆ. ಟುನಿಷ್ಯದಲ್ಲಿ ಅರಬ್ ಶೃಂಗಸಭೆ ನಡೆಯುತ್ತಿದೆ.