ರಿಯಾದ್: ತಮ್ಮದೇ ಹೊಣೆಗಾರಿಕೆಯಲ್ಲಿ ಸಂಬಂಧಿಕರನ್ನು ಉಮ್ರಾ ಯಾತ್ರಾರ್ಥಿಗಳಾಗಿ ಸೌದಿಗೆ ತರಲು ನೂತನ ವೀಸಾ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಈ ಯೋಜನೆಯನ್ನು ವಿದೇಶಿಯರು ಮತ್ತು ಮೂಲ ನಿವಾಸಿಗಳಿಗೆ ಬಳಸಿಕೊಳ್ಳಬಹುದು ಎಂದು ಹಜ್-ಉಮ್ರಾ ಸಚಿವಾಲಯದ ಆಂತರಿಕ ಇಲಾಖೆ ತಿಳಿಸಿದೆ.
ದೇಶದಲ್ಲಿ ವಾಸಿಸುತ್ತಿರುವ ವಿದೇಶಿಗರಿಗೆ ತಮ್ಮ ಹತ್ತಿರದ ಸಂಬಂಧಿಕರನ್ನು ಅತಿಥಿ ಉಮ್ರಾ ವೀಸಾದಲ್ಲಿ ತರಬಹುದು. ಮೂರ ರಿಂದ ಐದು ಸಂಬಂಧಿಗಳನ್ನು ತರಲು ಅವಕಾಶ ನೀಡಲಾಗುವುದು. ಯೋಜನೆಯ ಹೆಸರು ಉಮ್ರತುಲ್ ಮುಳೀಫ್ ಅಥವಾ ಅತಿಥಿ ಉಮ್ರಾ ಎಂದಾಗಿರುತ್ತದೆ.
ದೇಶೀಯರು ಮತ್ತು ವಿದೇಶೀಯರಿಗೆ ವರ್ಷಕ್ಕೆ ಮೂರು ಬಾರಿ ಅತಿಥಿಗಳನ್ನು ತರಲು ಅವಕಾಶ ನೀಡಲಾಗುವುದು ಎಂದು ಹಜ್-ಉಮ್ರಾ ಸಚಿವಾಲಯದ ಅಂಡರ್-ಸೆಕ್ರೆಟರಿ ಡಾ. ಅಬ್ದುಲ್ ಅಝೀಝ್ ವಸ್ಸಾನ್ ತಿಳಿಸಿದರು. ಅತಿಥಿಗಳು ದೇಶ ತೊರೆಯುವವರೆಗೂ ಎಲ್ಲಾ ಸೇವೆಗಳನ್ನು ಒದಗಿಸಬೇಕು ಮತ್ತು ಅವರ ಸಂಪೂರ್ಣ ಹೊಣೆಗಾರಿಕೆಯನ್ನು ಕರೆತಂದವರು ಹೊಂದಿರುತ್ತಾರೆ.
ದೇಶೀಯರು ತಮ್ಮ ನಾಗರಿಕ ಐಡಿ ಮತ್ತು ವಿದೇಶೀಯರು ತಮ್ಮ ಅಖಾಮ ಸಂಖ್ಯೆಯನ್ನು ಬಳಸಿಕೊಂಡು ಅತಿಥಿ ವೀಸಾಗಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಇಖಾಮದ ವೃತ್ತಿಯ ಕುರಿತ ನಿಯಮಗಳಿವೆಯೇ, ವೀಸಾ ಕಾಲಾವಧಿ, ಯಾವಾಗಿನಿಂದ ವೀಸಾ ಜಾರಿಗೆ ಬರಲಿದೆ ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.