ಮಾರ್ಚ್ 22 ಶುಕ್ರವಾರ ನ್ಯೂಝಿಲ್ಯಾಂಡಿನ ಇತಿಹಾಸದಲ್ಲಿ ವಿಶೇಷ ದಿನ. ನ್ಯೂಜಿಲಾಂಡಿನ ಉದ್ದಗಲಗಕ್ಕೂ ಜನರು ಶಿರವಸ್ತ್ರವನ್ನು ಧರಿಸಿ ಮುಸ್ಲಿಮರೊಂದಿಗೆ ತಮ್ಮ ಪ್ರೀತಿ ಮತ್ತು ಏಕತೆಯನ್ನು ಪ್ರದರ್ಶಿಸಿದರು ಹುಫ್ಫ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ನ್ಯೂಝಿಲೆಂಡಿನ ಪ್ರಧಾನಿ ಜೆಸಿಂತಾ ಅರ್ಡನ್‍ರ ಸಹಿತ ಸಾವಿರಾರು ಮಹಿಳೆಯರು ಶಿರವಸ್ತ್ರವನ್ನು ಧರಿಸಿ ಮಸೀದಿಯ ಮುಂದಿನ ಹಾಗ್ಲಿ ಪಾರ್ಕಿಗೆ ಖುತುಬಾ ಆಲಿಸಲು ಆಗಮಿಸಿದ್ದರು.
ಈ ಶಿರವಸ್ತ್ರ ಧರಿಸುವ ಅಭಿಯಾನದ ಹಿಂದೆ ಓರ್ವ ಮುಸ್ಲಿಂ ಮಹಿಳೆಯ ಕತೆಯಿದೆ. ಭಯೋತ್ಪಾದನೆಯ ದಾಳಿ ನಡೆಯಬಹುದೋ ಎಂಬ ಭೀತಿಯಿಂದ ನ್ಯೂಝಿಲ್ಯಾಂಡಿನ ಓರ್ವ ಮುಸ್ಲಿಂ ಮಹಿಳೆ ಶಿರವಸ್ತ್ರ ಧರಿಸಿ ಬೀದಿಗೆ ಬರಲು ಭಯಪಟ್ಟ ಸುದ್ದಿ ಹರಡುತ್ತಿದ್ದಂತೆಯೇ ಅಲ್ಲಿನ ಆಕೆ ಲಾಂಡಿನ ವೈದ್ಯರಾದ ಥಾಯ ಅಶ್ಮಾನ್ ಎಂಬವರು ಈ ಐಡಿಯಾವನ್ನು ಪ್ರಚಾರ ಪಡಿಸಿದರು. ಶುಕ್ರವಾರ ನ್ಯೂಝಿಲ್ಯಾಂಡಿನ ಎಲ್ಲ ಪ್ರಜೆಗಳೂ ಶಿರವಸ್ತ್ರ ಧರಿಸುವ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ಸಾರೋಣ ಎಂದು ಕರೆಕೊಟ್ಟರು.
ನಾವು ನಿಮ್ಮೊಂದಿಗೆ ಇದ್ದೇವೆ, ನೀವು ಈ ಬೀದಿಯನ್ನು ನಿಮ್ಮದೆಂದೇ ಭಾವಿಸಿ. ನಾವು ನಿಮ್ಮನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ ಎಂಬ ಸಂದೇಶವನ್ನು ನನಗೆ ಸಾರಬೇಕಿತ್ತು ಎಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ.
ಆಕ್ ಲಾಂಡ್, ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್ ಚರ್ಚ್ ನ ಮಹಿಳೆಯರು ಮತ್ತು ಮಕ್ಕಳು ಶಿರವಸ್ತ್ರ ಧರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
Great Nation..