janadhvani

Kannada Online News Paper

ಮೀಂಜದಲ್ಲಿ ಯಶಸ್ವಿ ರಕ್ತದಾನ ಶಿಬಿರ

ಮಂಜೇಶ್ವರ: ಮೀಂಜ ಯೂತ್ ಕೊ-ಒರ್ಡಿನೇಷನ್ ಕಮಿಟಿ(ರಿ) ಮತ್ತು ಬ್ಲಡ್ ಡೋನರ್ಸ್ ಮಂಗಳೂರು (ರಿ)ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ರಕ್ತನಿಧಿ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ದಿನಾಂಕ 17.03.2018 ಆದಿತ್ಯವಾರ ಮೀಯಪದವು ಎಸ್. ವಿ. ವಿ. ಎಚ್. ಎಸ್ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಬ್ರಾಹಿಂ ಹೊನ್ನಕಟ್ಟೆ ನೆರವೇರಿಸಿದರು, ಡಾ. ಜಯ ಪ್ರಕಾಶ್ ಉದ್ಘಾಟಿಸಿ ಮಾತನಾಡುತ್ತಾ ,ಅಪಘಾತ, ಶಸ್ತ್ರ ಚಿಕಿತ್ಸೆ ಮುಂತಾದ ಅತ್ಯಂತ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬರುವಾಗ ಸಂಬಂಧಿಕರ ಅಳಲು ಹೇಳ ತೀರದು,ಅಂತಹ ಸಂದರ್ಭದಲ್ಲಿ ಯಾರಾದರೂ ಸಹಾಯಕ್ಕೆ ಸಿಕ್ಕಿದರೆ ಅವರೆ ಆಪತ್ಪಾಂದವರು.

1900 ವರ್ಷಗಳ ಹಿಂದೆ ಈ ರಕ್ತ ನೀಡುವ ವ್ಯವಸ್ತೆಯೆ ಇರಲಿಲ್ಲ ಯಾಕೆಂದರೆ ಆಗ ಒಬ್ಬರ ರಕ್ತ ಇನ್ನೊಬ್ಬರಿಗೆ ನೀಡಬಹುದು ಎಂದು ಗೊತ್ತೆ ಇರಲಿಲ್ಲ ಹಾಗಾಗಿ ರಕ್ತದ ಅವಶ್ಯಕತೆ ಇದ್ದವರೆಲ್ಲ ಸಾವನ್ನಪ್ಪುತ್ತಿದ್ದರು. ನಂತರ ರಕ್ತದ ಗುಂಪುಗಳನ್ನು ಕಂಡುಹಿಡಿದು ರಕ್ತವನ್ನು ಬೇರೆಯವರಿಗೂ ನೀಡಬಹುದು ಎಂದು ತಿಳಿಸಿಕೊಟ್ಟವರು ಕಾರ್ಲ್ ಲ್ಯಾಂಡ್ ಎಂದು ರಕ್ತದ ಮಹತ್ವದ ಬಗ್ಗೆ ವಿವರಿಸಿದರು.

ಈ ಸಮಾರಂಭದಲ್ಲಿ ಸತ್ತಾರ್ ಹಾಜಿ ಮಾಕಾಳಿ, ಮಹಮ್ಮದ್ ಕಂಚೀಲ, ಕುಞಮೋನು ಚೆರಾಲ್, ಸಿದ್ದಿಕ್ ಎಂ. ಎಚ್, ಹರೀಶ್, ಸಿದ್ದೀಕ್ ಮಂಜೇಶ್ವರ ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಪುಟಾಣಿ ಮಹಮ್ಮದ್ ಫಾಝಿಲ್ ರಕ್ತದಾನದ ಟಿ ಶರ್ಟ್ ಧರಿಸಿ ರಕ್ತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಈ ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಫಾರೂಕ್ ಬಿಗ್ ಗ್ಯಾರೇಜ್, ಸಿರಾಜ್ ಪಜೀರ್, ಸಲಾಂ ಎಂ ಎಚ್ ಕಲ್ಲರಕೋಡಿ, ಸಿದ್ದೀಕ್ ಜಿ ಪಿ ಕಲ್ಲರಕೋಡಿ, ಮಸೂದ್ ಮೀಂಜ, ಅಶ್ರಫ್ ಚೇಡಿ ಮತ್ತು ಬಶೀರ್ ಮಂಜಲ್ ಗುಡ್ಡ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಮೀರ್ ಕುಲಬೈಲ್ ನಿರೂಪಿಸಿ, ನೌಷಾದ್ ಮೀಂಜ ಧನ್ಯವಾದ ಸಮರ್ಪಿಸಿದರು.

ವರದಿ: ಬ್ಲಡ್ ಡೋನರ್ಸ್ ಮಂಗಳೂರು (ರಿ)
(ಪತ್ರಿಕಾ ವಿಭಾಗ)

error: Content is protected !! Not allowed copy content from janadhvani.com