ದುಬೈ: ಕಾರ್ ಬಾಡಿಗೆಗೆ ಪಡೆಯುವವರಿಂದ ಪಾಸ್‌ಪೋರ್ಟ್ ಗಳನ್ನು ತೆಗೆದಿಡದಂತೆ ರೆಂಟ್ ಎ ಕಾರ್ ಫೆಡರಲ್ ಟ್ರಾಫಿಕ್ ಕೌನ್ಸಿಲ್ ನಿರ್ದೇಶಿಸಿದೆ.
ಕಾರನ್ನು ಬಾಡಿಗೆಗೆ ಪಡೆಯುವಾಗ ಮಿಕ್ಕ ಕಾರು ಕಂಪನಿಗಳು ಗ್ಯಾರಂಟಿಯಾಗಿ ಪಾಸ್ಪೋರ್ಟ್ ಅಥವಾ ಎಮಿರೇಟ್ ಐಡಿಯನ್ನು ಇರಿಸಿಕೊಳ್ಳುತ್ತವೆ. ಕಾರನ್ನು ಸುರಕ್ಷಿತವಾಗಿ ಹಿಂತಿರುಗಿಸಿದ ನಂತರ, ದಾಖಲೆಗಳನ್ನು ಹಿಂತಿರುಗಿಸಲಾಗುತ್ತಿತ್ತು.
ಬಾಡಿಗೆಗೆ ಪಡೆದ ಕಾರು ಹಾನಿಗೊಳಗಾದರೆ, ನಷ್ಟವನ್ನು ಪಾವತಿಸಿದ ನಂತರ ಮಾತ್ರ ದಾಖಲೆಗಳನ್ನು ಹಿಂತಿರುಗಿಸಲಾಗುತ್ತಿತ್ತು. ಆದರೆ, ಇದರ ದುರ್ಬಳಕೆಯಾಗುತ್ತಿರುವುದಾಗಿ ದೂರು ಲಭಿಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಈ ರೀತಿ ಸೂಚಿಸಿದ್ದಾರೆ.
ಫೆಡರಲ್ ಟ್ರಾಫಿಕ್ ಕೌನ್ಸಿಲ್‌ನ ನಿರ್ದೇಶಕ ಮೇಜರ್ ಜನರಲ್ ಮುಹಮ್ಮದ್ ಸೈಫ್ ಅಲ್ ಸಫೀನ್ ಅವರು, ಕಾರು ಬಾಡಿಗೆಗೆ ಪಡೆಯುವವರಿಂದ ಪಾಸ್ಪೋರ್ಟ್ ತೆಗೆದಿರಿಸದಂತೆ ಆದೇಶ ನೀಡಿದ್ದು ಒಂದು ವೇಳೆ ತೆಗೆದಿರಿಸಿದಲ್ಲಿ, ಅಂತಹ ಸಂಸ್ಥೆಗಳ ಪರವಾನಗಿಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಾಡಿಗೆಗೆ ಪಡೆಯುವವರ ಒರಿಜಿನಲ್ ದಾಕಲೆಗಳನ್ನು ತೆಗೆದಿರಿಸುವ ಅಧಿಕಾರ ಕಾರಿನ ಸಂಸ್ಥೆಗೆ ಇಲ್ಲ ಎಂಬುದನ್ನು ಈ ಹಿಂದೆಯೇ ವ್ಯಕ್ತಪಡಿಸಲಾಗಿತ್ತು.ಚಾಲನಾ ಪರವಾನಗಿ ಬಗ್ಗೆ ಮಾಹಿತಿ ಕೇಳಲು ಮಾತ್ರ ಸಂಸ್ಥೆಗಳಿಗೆ ಅಧಿಕಾರವಿದೆ ಎಂದು ಮುಹಮ್ಮದ್ ಸೈಫ್ ಅಲ್ ಸಫೀನ್ ಹೇಳಿದರು.