ರಿಯಾದ್: ಹಜ್ ಮತ್ತು ಉಮ್ರಾ ನಿರ್ವಹಿಸಲು ಆಗಮಿಸುವ ವಿದೇಶೀ ಯಾತ್ರಿಗಳ ವಿಸಾಗಳನ್ನು ಆನ್ ಲೈನ್ ಮೂಲಕ ನೀಡಲಾಗುವುದು ಎಂದು ಹಜ್ ಮತ್ತು ಉಮ್ರಾ ಖಾತೆಯ ಸಚಿವಾಲಯ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ಸಹಯೊಗದೊಂದಿಗೆ ಈ ಕ್ರಮ ಜಾರಿಗೆ ತರಲಾಗುತ್ತಿದ್ದು, ಆ ಮೂಲಕ ಹಜ್, ಉಮ್ರಾ ವೀಸಾಗಳಿಗೆ ಜಗತ್ತಿನ ಯಾವುದೇ ಕಡೆಯಿಂದಲೂ ನೇರವಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದು ಎಂದು ಹಜ್ ಉಮ್ರಾ ಸಚಿವಾಲಯದ ಮೇಲ್ವಿಚಾರಕ ಅಬ್ದುರ್ರಹ್ಮಾನ್ ಅಲ್ ಸಂಶ್ ಈ ಬಗ್ಗೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಹೊಸ ವಿಧಾನದ ಪ್ರಕಾರ ಆನ್ಲೈನ್ ಮೂಲಕ ಅಗತ್ಯವಾದ ಮಾಹಿತಿಯನ್ನು ನೀಡಿದರೆ ನಿಮಿಷಗಳಲ್ಲಿ ವೀಸಾ ಪಡೆಯಬಹುದು.
ಪ್ರಸ್ತುತ, ವಿದೇಶಿ ಏಜನ್ಸಿಗಳು, ದೂತಾವಾಸ ಕೇಂದ್ರದಿಂದ ವೀಸಾವನ್ನು ಪಡೆಯಬೇಕಾಗಿದ್ದು, ಆನ್ಲೈನ್ ವೀಸಾ ವ್ಯವಸ್ಥೆ ಜಾರಿಗೆ ಬಂದರೆ ವಿದೇಶಿ ದೂತಾವಾಸ ಅಥವಾ ಏಜೆನ್ಸಿಗಳನ್ನು ಸಮೀಸುವ ಅಗತ್ಯವಿಲ್ಲ.
ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಪೋರ್ಟಲ್ ನಲ್ಲಿ ಯಾತ್ರಿಕರು ಸೇವೆಗಳು ಮತ್ತು ಸೌದಿ ಅರೇಬಿಯಾದ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಲು ಅವಕಾಶವಿದೆ.