ಮಂಗಳೂರು: ಡೀಲ್ ಬೋಯ್ಸ್ ನಂದಾವರ ಮತ್ತು ಲಕ್ಕಿ ಸ್ಟಾರ್ ನಂದಾವರ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಕೆ.ಎಮ್.ಸಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಮಾರ್ಚ್10 ಆದಿತ್ಯವಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂದಾವರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಅಬ್ದುಲ್ ಮಜೀದ್ ದಾರಿಮಿ ಖತೀಬರು ಕೇಂದ್ರ ಜುಮಾ ಮಸೀದಿ ನಂದಾವರ ದುಆ ನೆರವೇರಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಹಾಫಿಳ್ ಸಿರಾಜುದ್ದಿನ್ ಖಾಸಿಮಿ ಪತ್ತನಾಪುರಂ ನೆರವೇರಿಸಿದರು.
ಸಜೀಪ ಕೇಂದ್ರ ಜುಮಾ ಮಸೀದಿ ಖತೀಬರು ಅಸ್ಫಾಕ್ ಫೈಝಿಯವರು ರಕ್ತದಾನದ ಮಹತ್ವವನ್ನು ವಿವರಿಸಿದರು. ಅವರನ್ನು ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಇಲ್ಯಾಸ್ ತುಂಬೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಮೊಹಮ್ಮದ್ ಇಲ್ಯಾಸ್ ತುಂಬೆ ರಕ್ತದಾನದ ಮಹತ್ವದ ಕುರಿತು ಮಾತನಾಡುತ್ತಾ ರಕ್ತ ಎಂಬ ವಿಷಯದಲ್ಲಿ ಯಾವುದೇ ಜಾತಿ ಧರ್ಮ ಪಂಗಡಗಳ ಭೇದವಿಲ್ಲ ಇದು ಹೃದಯಗಳ ಸಂಬಂಧ, ಜೀವವನ್ನು ಉಳಿಸುವ ಸಮಾಜದ ಭಾಂದವ್ಯತೆಯ ಕೊಂಡಿಯಾಗಿದೆ ಹೀಗಾಗಿ ಯಾವುದೇ ಅಂಜಿಕೆ ಕೀಳರಿಮೆಗೆ ಒಳಗಾಗದೆ ಪ್ರತಿ ಮೂರು ಅಥವಾ ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ರಕ್ತದಾನವನ್ನು ಮಾಡಿಕೊಂಡು ಇನ್ನೊಂದು ಜೀವದ ಆಸರೆಯಾಗಿ ಅದರೊಂದಿಗೆ ತಮ್ಮ ಆರೋಗ್ಯವನ್ನು ರಕ್ತದಾನ ನೀಡುವ ಮೂಲಕ ಕಾಪಾಡಿಕೊಳ್ಳಲು ಕರೆನೀಡಿದರು.
ಕಾರ್ಯಕ್ರಮದ ಅತಿಥಿಗಳಾದ ಜನಾಬ್ ಹೈದರ್ ಪರ್ತಿಪ್ಪಾಡಿ ರಕ್ತದಾನ ಮಾಡುವುದರಿಂದ ಮಾನವೀಯತೆ ಯಾವ ರೀತಿ ಉಳಿಸಬಹುದು ಎಂಬುದರ ಕುರಿತು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ಶ್ರೀಮಾನ್ ಚಂದ್ರಶೇಖರ್ ಎಚ್.ವಿ.ಸಬ್ ಇನ್ಸ್ ಪೆಕ್ಟರ್ ಬಂಟ್ವಾಳ ನಗರ ಠಾಣೆ. ಶ್ರೀಮಾನ್ ಹರೀಶ್ ಕುಮಾರ್ ಬಿ. ಎಮ್.ಮುಖ್ಯೋಪಾಧ್ಯಾಯರುದ. ಕ. ಜಿ.ಪಂ.ಹಿ. ಪ್ರಾ. ಶಾಲೆ ನಂದಾವ, ಜನಾಬ್ ಮುನಿಶ್ ಅಲಿ ಸದಸ್ಯರು ಬಂಟ್ವಾಳ ನಗರ ಸಭೆ,ಅತಿಥಿ ಗಳಾಗಿ ಬಾಗವಹಿಸಿದರು.
ಈ ಶಿಬಿರದಲ್ಲಿ ಸುಮಾರು 122 ರಕ್ತದಾನಿಗಳು ಸ್ವಯಂ ಪ್ರೇರಿತ ವಾಗಿ ರಕ್ತದಾನ ಮಾಡಿದರು.
ರಕ್ತದಾನ ಮಾಡಿದ ಪ್ರತಿಯೊಬ್ಬ ರಕ್ತದಾನಿಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಗಣ್ಯ ವ್ಯಕ್ತಿಗಳಿಗೆ ಡೀಲ್ ಬೊಯ್ಸ್ ನಂದಾವರ ಮತ್ತು ಲಕ್ಕಿಸ್ಟಾರ್ ನಂದಾವರ ಇದರ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಿದ್ದೀಕ್ ಮಂಜೇಶ್ವರ, ಫಯಾಝ್ ಮಾಡೂರು, ಸಿರಾಜ್ ಫಜೀರ್, ಫಾರೂಕ್ ಬಿಗ್ ಗ್ಯಾರೇಜ್, ಮೊಯ್ದು ಸೀತಂಗೋಳಿ, ಡೀಲ್ ಬೊಯ್ಸ್ ನಂದಾವರ ಮತ್ತು ಲಕ್ಕಿ ಸ್ಟಾರ್ ನಂದಾವರ ತಂಡದ ಹಫೀಝ್ ನಂದಾವರ, ಕೆ. ಶಾಫಿ ನಂದಾವರ, ಅಮೀರ್ ನಂದಾವರ,ಬಶೀರ್ ಬೊಳ್ಳಾಯಿ ಮತ್ತು ರಶೀದ್ ನಂದಾವರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಝ್ಝಾಲಿ ವಿಟ್ಲ ನಿರೂಪಿಸಿಸಿದರು.
ವರದಿ:
ಮಾಧ್ಯಮ ವಿಭಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ)