ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ರಿಯಾದ್ ಝೋನಿನ ಬದಿಯ ಸೆಕ್ಟರ್ ಅಧೀನದಲ್ಲಿ ನೂತನ ಶಾರಾ ಮದೀನಾ ಯುನಿಟ್ ಅಸ್ತಿತ್ವಕ್ಕೆ ತರಲಾಯಿತು.
ಕೆಸಿಎಫ್ ಬದಿಯ ಸೆಕ್ಟರ್ ಅಧ್ಯಕ್ಷರಾದ ಉಮ್ಮರ್ ಹಾಜಿ ಅಳಕೆಮಜಲ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಸಖಾಫಿ ಮಿತ್ತೂರು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಝ್ಝಾಕ್, ಅಬ್ದುಲ್ ಸತ್ತಾರ್, ಪ್ರಧಾನ ಕಾರ್ಯದರ್ಶಿ ಶಮ್ನಾಝ್ ಕಬಕ, ಜತೆ ಕಾರ್ಯದರ್ಶಿಗಳಾಗಿ ಶಾಹುಲ್ ಹಮೀದ್ ಸಾಣೂರು, ಇಸ್ಮಾಯಿಲ್ ಬೋಳಿಯಾರ್, ಕೋಷಾಧಿಕಾರಿಯಾಗಿ ಶಮೀರ್ ಕಬಕ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕ್ಕರ್ ಸಖಾಫಿ ಆಲಂಗಾರ್, ಉಮ್ಮರ್ ಹಾಜಿ ಅಳಕೆಮಜಲ್, ಮಜೀದ್ ವಿಟ್ಲ, ತಾಜುದ್ದೀನ್ ತಂಙಳ್, ಅಬ್ದುಲ್ ಹಮೀದ್ ಸೆರ್ಕಳ, ನಿಸಾರ್ ಕಟ್ಟ, ಅಳಕೆಮಜಲ್, ಅಬ್ದುಲ್ ಲತೀಫ್ ನೂಜಿ, ಸಲೀಂ ಮಿತ್ತೂರು, ಇಲ್ಯಾಸ್ ಉಪ್ಪಳ, ರಝ್ಝಾಕ್ ಕಾಂತಡ್ಕ, ಲತೀಫ್ ನೂಜಿ ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಗಳಾಗಿ ಕೆಸಿಎಫ್ ರಿಯಾದ್ ಝೋನಲ್ ನಾಯಕರಾದ
ಸಿದ್ದೀಕ್ ಸಖಾಫಿ ಪೆರುವಾಯಿ, ಇಬ್ರಾಹಿಂ ಮುರ ರವರು ಆಗಮಿಸಿ ನೂತನ ಸಮಿಯಿ ರಚಿಸಿ ಸಂಘಟನೆಯ ನೀತಿ ನಿಯಮ ಕುರಿತಂತೆ ತರಗತಿ ನಡೆಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತಂದರು.
ಅಬೂಬಕ್ಕರ್ ಸಖಾಫಿ ಆಲಂಗಾರ್ ಸ್ವಾಗತಿಸಿ ಶಮ್ನಾಝ್ ಕಬಕ ವಂದಿಸಿದರು.
ವರದಿ:ರಿಯಾ ನೆಲ್ಯಾಡಿ