ಅಬುಧಾಬಿ: ಅಲ್ ಮಖ್ತಾದಿಂದ ಹೈಲ್ ಆ್ಯಂಡ್ ರೈಯ್ಡ್ ಸೌಜನ್ಯ ಬಸ್ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಅಲ್ಖೊರ್ ಸ್ಟ್ರೀಟ್ ನಿಂದ ಸಾರಿಗೆ ಇಲಾಖೆಯ ಕೇಂದ್ರ ಕಚೇರಿ ಮೂಲಕ ಆಪರೇಟಿವ್ ಸೊಸೈಟಿ ಮಾರ್ಕೆಟ್, ಅಲ್ ಮಖ್ತ ರೋಡ್ 22 ಅಲ್ಖೋರ್ ಮಾರ್ಗವಾಗಿ ಎರಡು ಬಸ್‌ಗಳು ಸಂಚಾರ ನಡೆಸಲಿವೆ.ಸೀಝನ್ ಕಾಲದಲ್ಲಿ 15 ನಿಮಿಷಕ್ಕೊಮ್ಮೆಯೂ, ಅಲ್ಲದ ಸಮಯ 30 ನಿಮಿಷಗಳ ಅವಧಿಯಲ್ಲಿ ಬಸ್ ಚಲಿಸಲಿದೆ.
ಮೊದಲ ಬಸ್ ಬೆಳಿಗ್ಗೆ 6.30 ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 8 ಗಂಟೆಗೆ ಹೊರಡಲಿದೆ. ಈಗಾಗಲೇ ಮುಸಫ್ಫಾ ಮತ್ತು ಖಲೀಫಾ ಸಿಟಿ ಮುಂತಾದೆಡೆ ಉಚಿತ ಬಸ್ ಚಲಾವಣೆಯಲ್ಲಿದೆ. ಸಾರ್ವಜನಿಕರನ್ನು ಸಾರಿಗೆ ಸೇವೆಗಳತ್ತ ಆಕರ್ಷಿಸುವುದು ಸಾರಿಗೆ ಇಲಾಖೆಯ ಉದ್ದೇಶವಾಗಿದ್ದು, ಸಾರ್ವಜನಿಕರ ಸೌಕರ್ಯಕ್ಕಾಗಿ ಹತ್ತಿರದ ಬಸ್ ನಿಲ್ದಾಣಕ್ಕೆ ಉಚಿತ ಬಸ್ ಸೇವೆಯನ್ನು ನೀಡಲಾಗುತ್ತಿದೆ.