ದವಾದ್ಮಿ ಸೆಕ್ಟರ್:ಕೆಸಿಎಫ್ ಗಸೀಂ ಝೋನ್ ದವಾದ್ಮಿ ಸೆಕ್ಟರ್ ನ ಅಧೀನದಲ್ಲಿ ನೂತನ ಪ್ರಥಮ ಶಾಖೆಯು ಹಾಗೂ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಉಮರ್ ಕರ್ನೂರ್ ಇವರ ವಸತಿ ಗೃಹದಲ್ಲಿ ಸೆಕ್ಟರ್ ಅಧ್ಯಕ್ಷರಾದ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಸಭೆಯನ್ನು ಮಜೀದ್ ಬಾಹಸನಿ ದುವಾ ಮಾಡುವ ಮೂಲಕ ಚಾಲನೆ ನೀಡಿದರು
ಸಭೆಯಲ್ಲಿ ನೆರೆದ ಗಣ್ಯ ವ್ಯಕ್ತಿಗಳನ್ನು ಕಮಾಲುದ್ದೀನ್ ಕೆಸಿ ರೋಡ್ ಇವರು ಸ್ವಾಗತಿಸಿದರು. ದವಾದ್ಮಿ ಸೆಕ್ಟರ್ ನ ಮಾಜಿ ಅಧ್ಯಕ್ಷರೂ ನ್ಯಾಷನಲ್ ಕಮಿಟಿಯ ಸದಸ್ಯರಾದ ಹಬೀಬ್ ಅಡ್ಡೂರ್ ರವರು ಕೆಸಿಎಫ್ ನ ಬಗ್ಗೆ ವಿವರಣೆ ನೀಡಿ ಸಭೆಯನ್ನು ಉದ್ಘಾಟಿಸಿದರು. ನಂತರ ಸೆಕ್ಟರ್ ನಿಂದ RO ಆಗಿ ಆಗಮಿಸಿದ ಜಲಾಲುದ್ದೀನ್ ಬಾಹಸನಿಯವರು ನೂತನ ಸಮಿತಿಯನ್ನು ಘೋಷಣೆ ಮಾಡಿದರು .
ಅಧ್ಯಕ್ಷರಾಗಿ: ಕಮಾಲುದ್ದೀನ್ ಕೆಸಿ ರೋಡ್
ಉಪಾಧ್ಯಕ್ಷರಾಗಿ
ಉಮರ್ ಕರ್ನೂರ್
ಪ್ರ.ಕಾರ್ಯದರ್ಶಿಯಾಗಿ:ಅಬ್ದುಲ್ ಸಲಾಂ ಕೆಸಿ ರೋಡ್
ಜೊತೆ ಕಾರ್ಯದರ್ಶಿಯಾಗಿ
ಶಮೀಮ್ ಬೀಸಿ ರೋಡ್
ಕೋಶಾಧಿಕಾರಿಯಾಗಿ: ಆಸೀಫ್ ಈಶ್ವರಮಂಗಳ
ಕಾರ್ಯಕಾರಿ ಸದಸ್ಯರುಗಳಾಗಿ
ಇಬ್ರಾಹಿಂ ಮೊಂಟುಗೋಳಿ
ಅಕ್ಬರ್ ಬಿಜಾಪುರ
ಶಮೀರ್ ಕೆಸಿ ರೋಡ್
ಮಹಮ್ಮದ್ ಈಶ್ವರಮಂಗಳ
ಇವರನ್ನು ತಕ್ಬೀರ್ ಧ್ವನಿಯೊಂದಿಗೆ ಆರಿಸಲಾಯಿತು.
ನಮ್ಮನ್ನಗಲಿದ ಸೆಕ್ಟರ್ ಕಾರ್ಯದರ್ಶಿ ಯ ದೊಡ್ಡಪನ ಮಗ ರವೂಫ್ ಚಿಕ್ಕಮಗಳೂರು ಆದಿಶಕ್ತಿನಗರ ಮದ್ರಸ ವಿದ್ಯಾರ್ಥಿ ಮತ್ತು ಉಮರ್ ಕರ್ನೂರ್ ಇವರ ಚಿಕ್ಕಪ್ಪ ಇಬ್ರಾಹಿಂ ಚಿಕ್ಕಮಗಳೂರು ಇವರ ಮೇಲೆ ತಹ್ಲೀಲ್ ಸಮರ್ಪಿಸಿ ಮಯ್ಯಿತ್ ನಮಾಝ್ ಮಾಡಲಾಯಿತು.
ಮಜೀದ್ ಬಾಹಸನಿ ಇವರು ಕೆಸಿಎಫ್ ಸದಸ್ಯರ ಜೀವನ ಶೈಲಿ ಹಾಗೂ ಕೆಸಿಎಫ್ ನ ಅನುಭವಗಳನ್ನು ನಸೀಹತ್ ಮೂಲಕ ಹಂಚಿಕೊಂಡರು. ಸಭೆಗೆ ಗಣ್ಯ ವ್ಯಕ್ತಿಗಳಾಗಿ ದವಾದ್ಮಿ ಸೆಕ್ಟರ್ ನ ಮಾಜಿ ಅಧ್ಯಕ್ಷರಾದ ಸಲಾಂ ಮಡಿಕೇರಿ, ಇಶಾರ ಕನ್ವೀನರ್ ಇಂಮ್ತಿಯಾಝ್ ದೇರಳಕಟ್ಟೆ, ಅಬ್ದುಲ್ ಹಮೀದ್ ಕರ್ವೇಲು, ಸೆಕ್ಟರ್ ನ ಕಾರ್ಯದರ್ಶಿ ಸವಾದ್ ಚಿಕ್ಕಮಗಳೂರು ಉಪಸ್ಥಿತರಿದ್ದರು.
ನೂತನ ಕಾರ್ಯದರ್ಶಿ ಅಬ್ದುಲ್ ಸಲಾಂ ಕೆಸಿ ರೋಡ್ ಇವರು ಧನ್ಯವಾದವಿತ್ತು 3 ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ವರದಿ ಬಾಹಸನಿ ಉಳ್ತೂರ್