ದಮಾಂ: ಕಿಂಗ್ ಅಬ್ದುಲ್ಲಾ ಯೋಜನೆಯ ಝಂಝಂ ನೀರು ಸರಬರಾಜು ವಿಭಾಗವು ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳಿಗೆ ನೀಡುತ್ತಿದ್ದ 10 ಲೀಟರ್ ಝಂಝಂ ನೀರನ್ನು ಐದು ಲೀಟರ್‌ಗೆ ಇಳಿಸಿರುವುದಾಗಿ ಘೋಷಿಸಿದೆ.
ವಿಷನ್ 2030ರ ಭಾಗವಾಗಿ ಯಾತ್ರಿಗಳ ಸಂಖ್ಯೆ ಹೆಚ್ಚಳವಾಗುವ ಕಾರಣ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಉಂಟಾಗುವ ನಿರೀಕ್ಷೆಯಿದ್ದು, ಎಲ್ಲಾ ಯಾತ್ರಾರ್ಥಿಗಳಿಗೂ ನೀರು ಖಾತರಿಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮದೀನಾ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಟರ್ಮಿನಲ್ಗಳಲ್ಲಿ 5 ಲೀಟರ್ ಝಂಝಂ ನೀರು ಕೊಂಡೊಯ್ಯಲು ಅನುವು ಮಾಡುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಮತ್ತು ನಿಲ್ದಾಣ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಾ ಮತ್ತು ಇತರೆಡೆ ಝಂಝಂ ಮಾರಾಟಗಾರರಿಂದ ನೀರು ಖರೀದಿಸದೆ ವಿತರಣಾ ಕೇಂದ್ರದಿಂದ ಮಾತ್ರ ಸಂಗ್ರಹಿಸುವಂತೆ ಝಂಝಂ ಸರಬರಾಜು ಇಲಾಖೆ ಆದೇಶಿಸಿದೆ.