janadhvani

Kannada Online News Paper

ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಗ್ರಾಂಡ್ ಮುಫ್ತಿ

ನವದೆಹಲಿ:ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರನ್ನು ಗ್ರಾಂಡ್ ಮುಫ್ತಿಯಾಗಿ ಘೋಷಿಸಲಾಯ್ತು.

ದೆಹಲಿಯ ರಾಂಲೀಲಾ ಮೈದಾನದಲ್ಲಿ ನಡೆದ ರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ದೇಶದ ಪ್ರಮುಖ ಮುಸ್ಲಿಮ್ ವಿದ್ವಾಂಸರು ಸರ್ವಾನುಮತದಿಂದ ಎ.ಪಿ.ಉಸ್ತಾದರನ್ನು ಮುಫ್ತಿಯಾಗಿ ಘೋಷಿಸಿದರು.

ಸುನ್ನೀ-ಸೂಫೀ ಆದರ್ಶದಲ್ಲಿ ವಿವಿಧ ಮದ್ಹಬಿನಲ್ಲಿ ನಂಬಿಕೆ ತಾಳಿರುವ ದೇಶದ ಬಹುಪಾಲು ಮುಸ್ಲಿಮರ ಪ್ರಮುಖ ನೇತಾರರಾಗಿ ಕಾಂತಪುರಂ ಉಸ್ತಾದರನ್ನು ಅಂಗೀಕರಿಸುವುದಾಗಿ ವಿದ್ವಾಂಸರು ಹೇಳಿದರು.

ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಓರ್ವ ಪಂಡಿತರು ಈ ಪದವಿಯನ್ನು ಅಲಂಕರಿಸಿದ್ದಾರೆ.

2018 ಜುಲೈ 20ರಂದು ವಫಾತಾದ ಮೌಲಾನಾ ಮುಹಮ್ಮದ್ ಅಕ್ತರ್ ರಝಾ ಖಾನ್ ಅಝ್ಹರಿ ಎಂಬ ಉತ್ತರ ಭಾರತದ ವಿಧ್ವಾಂಸರಾಗಿದ್ದರು ಕೊನೆಯ ಭಾರತದ ಗ್ರಾಂಡ್ ಮುಫ್ತಿ.

ಬರೇಲ್ವಿ ಪ್ರಸ್ಥಾನದ ಸ್ಥಾಪಕರಾಗಿದ್ದ ಅಹ್ಮದ್ ರಝಾ ಖಾನ್ ಬರೇಲ್ವಿಯವರ ಕುಟುಂಬ ಪರಂಪರೆಯಲ್ಲಿ ಜನಿಸಿದ ಇವರು ಈಜಿಪ್ಟಿನ ಅಲ್ ಅಝ್ಹರ್ ವಿಶ್ವವಿಧ್ಯಾನಿಲಯದಲ್ಲಿ ವಿಧ್ಯಾಭ್ಯಾಸವನ್ನು ಪೂರ್ತಿಗೊಳಿಸಿ ಅಝ್ಹರಿ ಬಿರುದನ್ನು ಪಡೆದ ಉನ್ನತ ವಿಧ್ವಾಂಸರಲ್ಲೊಬ್ಬರಾಗಿದ್ದರು.
ಆತ್ಮೀಯ ಜಗತ್ತಿನಲ್ಲಿ ತನ್ನದೇ ಆದ ಉನ್ನತಿಯನ್ನು ಕರಗತಮಾಡಿಕೊಂಡ ಇವರು ತಾಜುಶ್ಶರೀಅ ಎಂಬ ಹೆಸರಿನಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದರು.

ಅವರ ವಿಯೋಗದಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com