janadhvani

Kannada Online News Paper

ಮುಳ್ಳೂರ್ಕೆರೆ ಮುಹಮ್ಮದಲಿ ಸಖಾಫಿಯವರ ವಾಹನದ ಮೇಲೆ ದುಷ್ಕರ್ಮಿಗಳಿಂದ ಆಕ್ರಮಣ

ವಿಟ್ಲ: ಕೇರಳ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಜಸ್ಟೀಸ್ ಮುಳ್ಳೂರ್ಕ್ಕರೆ ಮುಹಮ್ಮದಲಿ ಸಖಾಫಿಯವರ ವಾಹನದ ಮೇಲೆ ದುಷ್ಕರ್ಮಿಗಳು ಆಕ್ರಮಣ ನಡೆಸಿದ್ದಾರೆ.

ಫೆ.8 ರಂದು ರಾತ್ರಿ ವಿಟ್ಲ ಸಮೀಪದ ಕನ್ಯಾನ ಶಾಹುಲ್ ಹಮೀದ್ ವಲಿಯುಲ್ಲಾಹಿ ಮಖಾಂ ಉರೂಸ್ ಪ್ರಯುಕ್ತ ಕಾರ್ಯಕ್ರಮಕ್ಕೆ ಮುಖ್ಯಾತಿಥಿಯಾಗಿ ಆಗಮಿಸಿ ಪ್ರಭಾಷಣ ನಡೆಸಿ ಹಿಂದಿರುಗುವ ವೇಳೆ ಉಪ್ಪಳ ಸಮೀಪದ ಮಿತ್ತನಡ್ಕ ಎಂಬಲ್ಲಿ ಈ ಘಟನೆ ನಡೆದಿದೆ.

ಈ ಕುರಿತು ಪ್ರತಿಕ್ರಯಿಸಿದ ಮುಳ್ಳೂರ್ಕರೆ ಸಖಾಫಿಯವರು, ನನಗೆ ಯಾರೂ ವಿರೋಧಿಗಳಿರುವುದಾಗಿ ಗಮನಕ್ಕೆ ಬಂದಿರುವುದಿಲ್ಲ ,ಆದರೂ ಒಂದು ವರ್ಷ ಹಿಂದೆ ಬಾಯಾರ್ ತಂಙಳರ ನೇತೃತ್ವದ ಮುಜಮ್ಮಹ್ ನಲ್ಲಿ ಮಾಸಿಕ ಸ್ವಲಾತ್ ನಲ್ಲಿ ಭಾಗವಹಿಸಿ ನಡೆಸಿದ ಪ್ರಭಾಷಣದ ವಿರುದ್ದ ಯಾರೋ ಒಬ್ಬ ಟೆಲಿಫೋನ್ ಕರೆಮಾಡಿ, ಇನ್ಮುಂದೆ ಕಾಸರಗೋಡು ಪರಿಸರದಲ್ಲಿ ನಿನ್ನನ್ನು ಕಂಡರೆ ಕೈಕಾಲು ಮುರಿಯುದಾಗಿ ಜೀವ ಬೆದರಿಕೆ ಒಡ್ಡಿದ್ದನು, ಇದರ ವಿರುದ್ದ ಕೇರಳ ಮುಖ್ಯಮಂತ್ರಿ ಹಾಗೂ ಡಿಜಿಪಿ ಯವರಿಗೆ ದೂರು ನೀಡಿದ್ದು ವಡಕಾಂಚೇರಿ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಡಕಾಂಚೇರಿ ಮ್ಯಾಜಿಸ್ಟೇಟ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.

ಇದೀಗ ವಾಹನಕ್ಕೆ ಆಕ್ರಮಣ ನಡಿಸಿದ್ದು ಉಪ್ಪಳ ಪರಿಸರದಲ್ಲೇ ಆಗಿರುವುದರಿಂದ,ಮೇಲಿನ ಘಟನೆಗೆ ಸಂಬಂಧಪಟ್ಟು ಈ ಘಟನೆ ನಡೆದಿರಬಹುದೇ ಎಂದು ಸಂಷಯ ಉದ್ಭವಿಸಿದೆ ಎಂದರು.

ಭೀಮಾಕಾರದ ಕಲ್ಲೆಸೆತದಿಂದ ಮುಳ್ಳೂರ್ಕೆರೆ ಸಖಾಫಿಯವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ವಾಹನದ ಒಂದು ಭಾಗದ ಡೋರ್ ಮತ್ತು ಸೈಡ್ ಮಿರರ್ ಹಾನಿಗೊಂಡಿದೆ.

ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,ಆರೋಪಿಗಳ ಪತ್ತೆಗೆ ಅನ್ವೇಷಣೆ ಆರಂಭಿಸಲಾಗಿದೆ.

error: Content is protected !! Not allowed copy content from janadhvani.com