ಖತಾರ್: ದಕ್ಷಿಣ ಕನ್ನಡ ಜಿಲ್ಲೆಯ ಎಜುಕೇಷನ್ ಸಿಟಿ ಎಂದೇ ಖ್ಯಾತಿಗೆ ಪಾತ್ರ ವಾದ ದೇರಳಕಟ್ಟೆ ಯ ಮುಡಿಪುವಿನಲ್ಲಿ ತಲೆ ಎತ್ತಿ ನಿಂತಿರುವ ಮಜ್ಲಿಸ್ ಎಜು ಪಾರ್ಕ್ ನ ಸಾರಥಿ ಬಹು ಸಯ್ಯಿದ್ ಮಹಮ್ಮದ್ ಅಶ್ರಪ್ ಅಸ್ಸಖಾಫ್ ಮದನಿ ಆದೂರು ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖತ್ತಾರ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರಾಗಿ ಬಹು:ಕೆ.ಬಿ.ಅಬ್ದುಲ್ಲಾಹ್ ಹಾಜಿ ಕುಂಬಳೆ, ಕಾರ್ಯದರ್ಶಿಯಾಗಿ ಖಲೀಲ್ ಉರುಮಣೆ,ಕೋಶಾಧಿಕಾರಿಯಾಗಿ ಇಬ್ರಾಹಿಂ ದೇರಳಕಟ್ಟೆ ಸಮೇತ 21 ಸದಸ್ಯಸರ ಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಶಿಲ್ಪಿ ಆದೂರು ತಂಙಳ್ ಮಜ್ಲಿಸ್ ನ ಕಾರ್ಯ ವೈಖರಿಗಳ ಬಗ್ಗೆ ವಿವರಿಸಿ, ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರವಾದ ಮಾಸಿಕ ಸಖಾಫಿಯಾ ರಾತೀಬ್ ನ ಅನುಭವವನ್ನು ಮನವರಿಕೆ ಮಾಡಿದರು.
ಮಜ್ಲಿಸ್ ನ ಆವಶ್ಯಾರ್ಥ ಆಗಮಿಸಿದ ಸಂಸ್ಥೆಯ ಮೆನೇಜರ್ ಸಮೀರ್ ಸಖಾಫಿ ಸ್ವಾಗತಿಸಿ ಹಾಪಿಝ್ ಫಾರೂಖ್ ಸಖಾಫಿ ವಂದಿಸಿದರು.