ಕಿನ್ಯಾ: SSF ರಾಷ್ಟೀಯ ಸಮಿತಿ ಹಮ್ಮಿಕೊಂಡ “ಹಿಂದ್ ಸಫರ್” ನ ಯಶಸ್ವೀ ಕಾರ್ಯಾಚರಣೆಯಲ್ಲಿ ದೇಶದ ಹಲವು ನಾಯಕರ ನೇತೃತ್ವವಿದ್ದರೂ ಕಿನ್ಯಾ ಗ್ರಾಮದವರಿಗೆ ಅಭಿಮಾನವಾದ,ತನ್ನ ಹುಟ್ಟೂರು ಮೊಂಟೆಪದವು ಆಗಿದ್ದರೂ ಇದೀಗ ಕಿನ್ಯಾದಲ್ಲಿ ವಾಸವಿರುವ, ಅಚ್ಚು ಮೆಚ್ಚಿನ ಸಂಘಟನಾ ನಾಯಕ, ಧಾರ್ಮಿಕ ಹಾಗೂ ಲೌಕಿಕ ವಿಷಯಗಳನ್ನು ಕರಗತ ಮಾಡಿಕೊಂಡ ಬಹು:ಕೆ.ಎಂ ಅಬೂಬಕರ್ ಸಿದ್ದೀಖ್ ಕಿನ್ಯ ರವರಿಗೆ ಕಿನ್ಯ ಸುನ್ನೀ ಸಂಘ ಕುಟುಂಬದ ವತಿಯಿಂದ ಸನ್ಮಾನ ಕಾರ್ಯಕ್ರಮವು ಫೆ,8 ರಂದು ಜುಮುಅ ನಮಾಜಿನ ಬಳಿಕ ನಡೆಯ್ತು.
ಕಿನ್ಯ ಸುನ್ನೀ ಸಂಘಟನೆಗಳ ಸುಪ್ರೀಂ ಕೌನ್ಸಿಲ್ K.H ಇಸ್ಮಾಯಿಲ್ ಸಅದಿ ಉಸ್ತಾದರ ನಿರ್ದೇಶದಂತೆ ಬುಖಾರಿ ಮಸ್ಜಿದ್ ಕಿನ್ಯದಲ್ಲಿ ನಾಯಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಅಲವಿ ತಂಙಳ್, ಉಸ್ಮಾನ್ ಸಖಾಫಿ ಉಸ್ತಾದ್, ಕೆ.ಎಂ ಮುಸ್ತಫ ನಈಮಿ ಖಾಮಿಲ್ ಸಖಾಫಿ,V.A ಮೊಹಮ್ಮದ್ ಮುಸ್ಲಿಯಾರ್, M.KM ಇಸ್ಮಾಯಿಲ್, ಸಯ್ಯಿದ್ ತ್ವಾಹ, ಶರೀಫ್ ಸಅದಿ, ಅಬ್ದುಲ್ ಹಮೀದ್ ಮುಸ್ಲಿಯಾರ್, K.M ಮೂಸಕುಂಞ,S.ಅಬ್ದುರ್ರಹ್ಮಾನ್ ಇಂಜಿನಿಯರ್, ಸಲೀಂ ಸಅದಿ, ಹಮೀದ್ ಮೀಂಪ್ರಿ, ಅಶ್ರಫ್ I.M, ಸತ್ತಾರ್ ಮೀಂಪ್ರಿ, ಸಫ್ವಾನ್ ಮೀಂಪ್ರಿ, ಇಸಾಕ್ ಕಿನ್ಯ ಅಲ್ಲದೆ SYS ಹಾಗೂ SSF ನಾಯಕರು ಉಪಸ್ಥಿತರಿದ್ದರು.ಮಹಬೂಬ್ ಸಖಾಫಿ ಸ್ವಾಗತಿಸಿದರು.
ಭಾರತದ ಇತಿಹಾಸದಲ್ಲೇ ಪ್ರಥಮವಾಗಿ ಮುಸ್ಲಿಂ ವಿದ್ಯಾರ್ಥಿ ಸಂಘಟನೆಯೊಂದು ಹಮ್ಮಿಕೊಂಡ “ಹಿಂದ್ ಸಫರ್” ದೇಶದ 22 ರಾಜ್ಯಗಳಲ್ಲಿ 14 ಸಾವಿರಕ್ಕಿಂತಲೂ ಅಧಿಕ ಕಿಲೋ ಮೀಟರ್ ಪರ್ಯಟನೆ ನಡೆಸಿ ತಮ್ಮ ಸಂಘಟನೆ ಎತ್ತಿ ಹಿಡಿದ “ಸಾಕ್ಷರತೆ ಮತ್ತು ಸಹಿಷ್ಣುತೆಯ ಭಾರತಕ್ಕಾಗಿ” ಎಂಬ ಉದಾತ್ತ ಘೋಷ ವಾಕ್ಯದ ಪವಿತ್ರ ಸಂದೇಶದೊಂದಿಗೆ ಕಾಶ್ಮೀರದಿಂದ ಆರಂಭಗೊಂಡು ವಿವಿದ ರಾಜ್ಯಗಳನ್ನು ಕ್ರಮಿಸಿ ಕೇರಳದ ಕಲ್ಲಿಕೋಟೆ ಕಡಲ ಕಿನಾರೆಯಲ್ಲಿ ಸುನ್ನೀ ಉಲಮಾ ದಿಗ್ಗಜರ ಸಮ್ಮುಖದಲ್ಲಿ ಫೆ.7ರಂದು ಅತ್ಯಂತ ಐತಿಹಾಸಿಕವಾಗಿ ಕಾರ್ಯಕ್ರಮ ಸಮಾಪ್ತಿಗೊಂಡಿತ್ತು.
ವರದಿ:ಫಯಾಝ್ ಕಿನ್ಯ