ರಿಯಾದ್:ಸೌದಿ ಅರೇಬಿಯಾದಲ್ಲಿ ಕಾರ್ಮಿಕನು ಕೆಲಸಕ್ಕೆ ಹಾಜರಾಗದ ಕಾರಣಕ್ಕಾಗಿ, ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಹುರೂಬ್ ಮಾಡುವುದಕ್ಕೆ ಕಾರ್ಮಿಕ ಸಚಿವಾಲಯದ ಕಡಿವಾಣ.
ಉದ್ಯೋಗಿ ಪರಾರಿಯಾದರೆ ಅಥವಾ ಕೆಲಸಕ್ಕೆ ಹಾಜರಾಗದೇ ಇದ್ದಲ್ಲಿ ಅವರ ಪ್ರಾಯೋಜಕತ್ವವನ್ನು ಮುಕ್ತಗೊಳಿಸುವ ಸಲುವಾಗಿ ಸಚಿವಾಲಯ ಕಾರ್ಯರೂಪಕ್ಕೆ ತಂದ ವಿಧಾನವಾಗಿದೆ ಹುರೂಬ್. ಹಾಗೆ ಮಾಡಿದಾಗ, ಕೆಲಸಗಾರನಿಗೆ ಪ್ರಾಯೋಜಕತ್ವ ಇರುವುದಿಲ್ಲ. ನಂತರ ಆತನಿಗಿರುವ ಆಯ್ಕೆ ಎಂದರೆ ಪೋಲಿಸರಿಗೆ ಶರಣಾಗುವುದು ಅಥವಾ ಪ್ರಾಯೋಜಕರ ಸಹಕಾರದಿಂದ ಇನ್ನೊಬ್ಬ ಪ್ರಾಯೋಜಕನ ಕೈಕೆಲಗೆ ದುಡಿಯುವುದಾಗಿದೆ.
ಕಾರ್ಮಿಕ ತರ್ಕ ಮತ್ತು ಇಷ್ಟಪಡದ ಕಾರಣಕ್ಕಾಗಿಯೂ ಹುರೂಬ್ ಮಾಡಲಾಗುವ ಸಂಭವವೂ ನಡೆಯುತ್ತಿದೆ. ಆದರೆ ಇನ್ನು ಮುಂದೆ, ಉದ್ಯೋಗದಾತನು ಕೆಲಸಗಾರನಿಗೆ ನಿಯಮ ಮತ್ತು ಷರತ್ತುಗಳ ಅನುಸಾರ ಮಾತ್ರ ಹುರೂಬ್ ಮಾಡಬಹುದಾಗಿದೆ. ಕಾರ್ಮಿಕ ಸಚಿವಾಲಯವು ಇದಕ್ಕಾಗಿ ಹೊಸ ಸಂವಿಧಾನವನ್ನು ಪ್ರಾರಂಭಿಸಿದೆ.
ಇನ್ನುಮುಂದೆ ಕೆಲಸಗಾರನನ್ನು ಏಕಪಕ್ಷೀಯವಾಗಿ ವಜಾ ಮಾಡಲು ಸಾಧ್ಯವಿಲ್ಲ. ಹುರೂಬ್ ವ್ಯವಸ್ಥೆಯನ್ನು ತಿದ್ದು ಪಡಿಸಲಾಗುದ್ದು,
ಪ್ರಾಯೋಜಕರ ಸಂಸ್ಥೆಯ ಆನ್ಲೈನ್ ಪೋರ್ಟಲ್ ಮೂಲಕ ಹುರೂಬನ್ನು ದಾಖಲಿಸಬೇಕು.
ಹುರೂಬ್ನ ಮುಖ್ಯ ನಿಬಂಧನೆಗಳು
- ಕೆಲಸಗಾರನು ಕೆಲಸದಲ್ಲಿ ಮುಂದುವರಿಯುತ್ತಿರಬೇಕು.
- ಕಂಪೆನಿಗೆ ವಿರುದ್ಧವಾಗಿ ಯಾವುದೇ ಪ್ರಕರಣ ಇರಬಾರದು.
- ಕಾರ್ಮಿಕರ ಇಖಾಮ ವಾಯಿದೆ ಇರುವುದಾಗಿರಬೇಕು ಅಥವಾ ಇತ್ತೀಚೆಗೆ ಮುಕ್ತಾಯಗೊಂಡ ಇಖಾಮಾ ಹೊಂದಿರಬೇಕು.
ಹುರೂಬ್ ಫೈಲ್ ದಾಖಲಿಸಿದ ಬಳಿಕ ಕಾರ್ಮಿಕನ ಅಸಾಮಾಧಾನವಿಲ್ಲದಿದ್ದಲ್ಲಿ ಮಾತ್ರ ಸಚಿವಾಲಯ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತದೆ. ಹುರೂಬನ್ನು ದಾಖಲಿಸಿದರೆ, ಉದ್ಯೋಗದಾತ ಮತ್ತು ಉದ್ಯೋಗಿಯ ಮೊಬೈಲ್ಗೆ ಸಂದೇಶವನ್ನು ರವಾನಿಸಲಾಗುತ್ತದೆ.
ಉದ್ಯೋಗದಾತನು ಕೆಲಸಗಾರ ಕಲಸಕ್ಕೆ ಸೇರಿದ ದಿನಾಂಕ,ಕೊನೆಯದಾಗಿ ಕೆಲಸಕ್ಕೆ ಹಾಜರಾದ ದಿನಾಂಕ, ಕೊನೆಯದಾಗಿ ಸಂಬಳ ಪಾವತಿಸಿದ ದಿನಾಂಕವನ್ನು ಹುರೂಬ್ ದಾಖಲಿಸುವ ಮುನ್ನ ಒದಗಿಸಬೇಕು.
ನವೀಕೃತ ಹುರೂಬ್ ವ್ಯವಸ್ಥೆಯಲ್ಲಿ, ನೌಕರ ತನ್ನ ವೈಯಕ್ತಿಕ ಮಾಹಿತಿಯೊಂದಿಗೆ ಸಚಿವಾಲಯದ ವೈಯಕ್ತಿಕ ಸೇವೆಯ ವಿಭಾಗದ ಪೋರ್ಟಲ್ನಲ್ಲಿ ತನ್ನ ಅಸಮಾಧಾನವನ್ನು ಉಲ್ಲೇಖಿಸಬೇಕು.(ಕಾರ್ಮಿಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಹುರೂಬ್ ಜಾರಿಯಾಗುವುದು) ಈ ಸಂದರ್ಭದಲ್ಲಿಯೂ, ಮಾಲೀಕ ಮತ್ತು ಉದ್ಯೋಗದಾತರಿಗೆ ಫೋನ್ ಸಂದೇಶ ಲಭಿಸುವುದು ಹೊಸ ವಿಧಾನದ ವಿಶೇಷತೆಯಾಗಿದೆ.