ಮಂಗಳೂರು, ಫೆ.3:ಕರ್ನಾಟಕದ ಮರ್ಕಝ್ ಎಂದೇ ಪ್ರಖ್ಯಾತಿ ಹೊಂದಿರುವ ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಶುಕ್ರವಾರ ಆರಂಭಗೊಂಡಿದ್ದ ಮಹಾ ಸಮ್ಮೇಳನವು ರವಿವಾರ ಸಮಾಪ್ತಿಗೊಂಡಿತು.
ದೇಶ-ವಿದೇಶಗಳ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಪಾಲ್ಗೊಂಡಿದ್ದ ಈ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾದರು.
25 ವರ್ಷಗಳ ಹಿಂದೆ 11 ಯತೀಂ ಮಕ್ಕಳ ಶಿಕ್ಷಣ ದೊಂದಿಗೆ ಆರಂಭಗೊಂಡ ಈ ಸಂಸ್ಥೆಯಲ್ಲಿ ಕರ್ನಾಟಕ ಮತ್ತು ಕೇರಳದ 3,500 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಶೈಖುನಾ ಅಲ್ಹಾಜ್ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್‌ರ ಕಾರ್ಯವೈಖರಿಯ ಬಗ್ಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
25 ಜೋಡಿ ಸಾಮೂಹಿಕ ವಿವಾಹ, ರಿಫಾಈ ರಾತೀಬ್, ಮಹ್ಳರತುಲ್ ಬದ್ರಿಯ್ಯ, ಮರ್ಝೂಖಿ ಸಂಗಮ, ಮಜ್ಲಿಸುತ್ತಝ್‌ಕಿಯ, ನಸೀಹತ್ ಮಜ್ಲಿಸ್, ಬುರ್ದಾ ಮಜ್ಲಿಸ್, ಅಗಲಿದ ನಾಯಕರ ಅನುಸ್ಮರಣೆ, ಸ್ಟೂಡೆಂಟ್ಸ್ ಕಾನ್ಫರೆನ್ಸ್, ಮುತಅಲ್ಲಿಂ ಕಾನ್ಫರೆನ್ಸ್, ಹನಫಿ ಕಾನ್ಫರೆನ್ಸ್,ಸೌಹಾರ್ಧ ಸಂಗಮ, ಸನದುವಸ್ತ್ರ ಹಸ್ತಾಂತರ, ದಮ್ಮಾಮ್ ಟವರ್ ಉದ್ಘಾಟನೆ, ಪ್ರವಾಸಿ ಮೀಟ್, ಅಲುಮ್ನಿ ಮೀಟ್, ಸೌಹಾರ್ದ ಸಂಗಮ ಇತ್ಯಾದಿಯೊಂದಿಗೆ ಆಕರ್ಷಕ ವಾಹನ ಮತ್ತು ಸ್ಕೌಟ್ ಜಾಥಾ ಸಮ್ಮೇಳನಕ್ಕೆ ವಿಶೇಷ ಮೆರುಗು ನೀಡಿತ್ತು.
ಸನದುದಾನ: ಅಲ್ ಮದೀನಾ ದಅ್ವಾ ಕಾಲೇಜಿನಲ್ಲಿ ‘ಮರ್ಝೂಖಿ’ ಪದವಿ ಪಡೆದ 13 ವಿದ್ಯಾರ್ಥಿಗಳಿಗೆ ಸಮಾರೋಪ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಸನದು ಪ್ರದಾನಗೈದರು. ಸಯ್ಯಿದ್ ಅಲಿ ಬಾಫಕಿ ತಂಙಳ್ ದುಆಗೈದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾದ ರಈಸುಲ್ ಉಲಮಾ ಶೈಖುನಾ ಇ. ಸುಲೈಮಾನ್ ಉಸ್ತಾದ್ ಸಮಾರೋಪ ಸಮಾರಂಭ ಉದ್ಘಾಟಿಸಿದರು.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಅಲಿಕುಂಞಿ ಉಸ್ತಾದ್ ಶಿರಿಯಾ ಹಾಫಿಳ್ ಸನದು ಪ್ರದಾನಗೈದರು. ಜಂಇಯ್ಯತುಲ್ ಉಲಮಾ ಕರ್ನಾಟಕದ ಅಧ್ಯಕ್ಷ ಶೈಖುನಾ ಇಬ್ರಾಹೀಂ ಮುಸ್ಲಿಯಾರ್ ಬೇಕಲ ಸನದುದಾನ ಭಾಷಣೈದರು.
ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್‌ವೈಎಸ್ ಕೇರಳ ರಾಜ್ಯಾಧ್ಯಕ್ಷ ಮೌಲಾನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಮತ್ತು ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಉಸ್ತಾದ್ ಮುಖ್ಯಭಾಷಣಗೈದರು.
ಒಮಾನ್‌ನ ರಾಯಲ್ ಪೊಲೀಸ್ ಕಮಾಂಡರ್ ಸಯ್ಯಿದ್ ಸುಲೈಮಾನ್ ಅಲಿ ಅಲ್ ಬಲೂಶಿ ಮತ್ತು ಮಾಣಿಯ ದಾರುಲ್ ಇರ್ಶಾದ್ ಸಂಸ್ಥೆಯ ಅಧ್ಯಕ್ಷ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮುಖ್ಯಮಂತ್ರಿಯ ಸಂಸದೀಯ ಕಾರ್ಯ ದರ್ಶಿ ಐವನ್ ಡಿಸೋಜ, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಮಹಮೂದ್ ಮುಸ್ಲಿಯಾರ್ ಎಡಪ್ಪಾಲ, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು, ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಹುಸೈನ್ ಸಅದಿ ಕೆ.ಸಿ.ರೋಡ್, ಮಾಜಿ ಶಾಸಕ ಮೊಯ್ದಿನ್ ಬಾವ, ಮುಮ್ತಾಝ್ ಅಲಿ, ಕಣಚೂರು ಮೋನು, ಹನೀಫ್ ಹಾಜಿ ಉಳ್ಳಾಲ, ಮಜೀದ್ ಹಾಜಿ ಉಚ್ಚಿಲ, ಕತರ್ ಬಾವ ಹಾಜಿ, ಏಶ್ಯನ್ ಬಾವಾ ಹಾಜಿ, ಎಸ್.ಕೆ. ಖಾದರ್ ಹಾಜಿ, ಹಸನ್ ಹಾಜಿ ಸಾಂಬರ್ ತೋಟ, ಅಶ್ರಫ್ ಸಅದಿ ಮಲ್ಲೂರು, ಜಿ.ಎಂ.ಕಾಮಿಲ್ ಸಖಾಫಿ, ಆಲಿಕುಂಞಿ ಪಾರೆ, ಎನ್.ಎಸ್.ಕರೀಂ, ಹಮೀದ್ ಹಾಜಿ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಅಲ್ ಮದೀನಾದ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಮುಹಮ್ಮದ್ ಮುಸ್ತಫಾ ಕಿರಾಅತ್ ಪಠಿಸಿದರು. ಮುನೀರ್ ಸಖಾಫಿ ಕಾರ್ಯಕ್ರಮವನ್ನು ನಿರೂಪಿಸಿದರು.