ರಿಯಾದ್: ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸುವ ಅಂಗವಾಗಿ ಸೌದಿಯ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಸುರಕ್ಷೆ ಸಹಿತ ಆಂತರಿಕ ವಲಯದಲ್ಲಿ ಸಂಯುಕ್ತವಾದ ಯೋಜನೆಯು ಈ ಭೇಟಿಯ ಗುರಿ ಎನ್ನಲಾಗಿದೆ.ಆದರೆ, ಈ ಭೇಟಿ ಬಗ್ಗೆ ಅಧಿಕೃತವಾಗಿ ದೃಢೀಕರಿಸಿಲ್ಲ. ಭಾರತದಲ್ಲಿ ಸೌದಿಯು ಶಕ್ತಿ, ರಕ್ಷಣಾ, ಆಹಾರ ಭದ್ರತೆ ಮತ್ತು ನಿರ್ಮಾಣ ವಲಯದಲ್ಲಿ ಹೂಡಿಕೆಯನ್ನು ಇನ್ನಷ್ಟು ವೃದ್ದಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ನಡುವೆ ಕಳೆದ ನವೆಂಬರ್‌ನಲ್ಲಿ ಐರಿಸ್‌ನಲ್ಲಿ ನಡೆದ ಭೇಟಿಯಲ್ಲಿ ನಿರ್ಣಯಿಸಲಾಗಿತ್ತು.