ದುಬೈ:ಯುಎಇ ನಿರ್ಮಿತ ಉತ್ಪನ್ನಗಳಿಗೆ ಕತರ್ ನಿಷೇಧ ಹೇರಿದೆ ಎಂದು ಆರೋಪಿಸಿ ಖತರ್ ವಿರುದ್ಧ ವಿಶ್ವ ವಾಣಿಜ್ಯ ಮಂಡಳಿಗೆ ಯುಎಇ ದೂರು ನೀಡಿದೆ.ಕತರ್ ವಿರುದ್ಧ ದಿಗ್ಬಂದನ ಮುಂದುವರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಕೊಂಡಿದೆ.
ಯುಎಇ, ಸೌದಿ ಅರೇಬಿಯಾ, ಬಹ್ರೈನ್ ಮತ್ತು ಈಜಿಪ್ಟ್ ನ ಉತ್ಪನ್ನಗಳ ಮೇಲೆ ಖತರ್ ವಾಣಿಜ್ಯ ಸಚಿವಾಲಯ ನಿಷೇಧ ಹೇರಿದೆ ಎಂದು ವಿಶ್ವ ವ್ಯಾಪಾರ ಸಂಸ್ಥೆಯ ಸಮಸ್ಯೆ ಪರಿಹಾರ ಸಮಿತಿಗೆ ದೂರು ಸಲ್ಲಿಸಲಾಗಿದೆ.ಪ್ರಸ್ತುತ ದೇಶಗಳ ಔಷಧಿಗಳನ್ನು ಮತ್ತು ಇತರ ಉತ್ಪನ್ನಗಳನ್ನು ಮಾರಬಾರದೆಂದು ಖತರ್ ಆರೋಗ್ಯ ಸಚಿವಾಲಯ ಔಷಧಿ ಕಂಪೆನಿಗಳಿಗೆ ಸೂಚನೆ ನೀಡಿದೆ ಎಂದು ಯುಎಇ ಆರೋಪಿಸಿದೆ. ಖತರ್‌ನ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿರುವ ಯುಎಇ ಮೂಲದ ಸಂಸ್ಥೆಗಳನ್ನು ಹೊರಗಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಯೋತ್ಪಾದನಾ ಕೃತ್ಯಗಳಿಗೆ ಖತರ್ ಸಹಾಯ ನೀಡುತ್ತಿದೆ ಎಂಬ ಆರೊಪ ಹೊರಿಸಿ 2017 ಜೂನ್‌ನಲ್ಲಿ, ಯುಎಇ, ಸೌದಿ ಅರೇಬಿಯಾ, ಬಹ್ರೈನ್ ಮತ್ತು ಈಜಿಪ್ಟ್ ಖತರ್ನೊಂದಿಗಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧವನ್ನು ಕಡಿದು ಹಾಕಿತ್ತು, ಈ ಕುರಿತು ಖತರ್ 2017 ರ ಆಗಸ್ಟ್‌ನಲ್ಲಿ, ವರ್ಲ್ಡ್ ಕಾಮರ್ಸ್ ಅಸೋಸಿಯೇಷನ್ ಗೆ ಸಲ್ಲಿಸಿದ ದೂರಿನ ಅನ್ವಯ ಕ್ರಮ ಮುಂದುವರಿಯುತ್ತಿದೆ.