ದುಬೈ: ಟಿಫ್ಫಾನಿ ಕಂಪೆನಿಯ ಬ್ರೇಕ್ ಸುಪಾ ಎನ್ನುವ ಚಾಕೊಲೇಟ್‌ನಲ್ಲಿ ಹಂದಿಯ ಕೊಬ್ಬು ಅಡಕವಾಗಿದೆ ಎನ್ನುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಡಲಾದ ವರದಿಗೆ ಯಾವುದೇ ಆಧಾರವಿಲ್ಲ ಎಂದು ದುಬೈ ಮುನ್ಸಿಪಾಲಿಟಿ ವ್ಯಕ್ತಪಡಿಸಿದೆ.
ಸಸ್ಯಾಹಾರಿ ಎಣ್ಣೆ ಮತ್ತು ಇನ್ನಿತರ ನಿಷಿದ್ಧವಲ್ಲದ ಪದಾರ್ಥಗಳನ್ನು ಮಾತ್ರ ಆ ಚಾಕೊಲೆಟ್‌ನಲ್ಲಿ ಬಳಸಲಾಗುತ್ತದೆ ಎಂದು ಮುನಿಸಿಪಾಲಿಟಿ ತಿಳಿಸಿದೆ. ಆ ಚಾಕೊಲೇಟನ್ನು ಯುಎಇಯಲ್ಲೇ ತಾಯಾರಿಸಲಾಗುತ್ತಿದ್ದು, ಹಂದಿ ಮಾಂಸದ ಬಳಕೆ ಯುಎಇಯಲ್ಲಿ ಇಲ್ಲವೆಂದೂ ಮುನಿಸಿಪಾಲಿಟಿ ವ್ಯಕ್ತಪಡಿಸಿದೆ.