janadhvani

Kannada Online News Paper

ಪ್ರವಾದಿ ನಿಂದನೆ: ವಿಷ್ಣುದೇವ್ ನ ಶಿಕ್ಷೆಯನ್ನು ಮತ್ತಷ್ಟು ಕಠಿಣ ಗೊಳಿಸಿದ ದಮ್ಮಾಮ್ ಕೋರ್ಟ್

ದಮಾಂ: ಪ್ರವಾದಿ (ಸ) ಮತ್ತು ಸೌದಿ ಅರೇಬಿಯಾ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟದಾಗಿ ಪರಾಮರ್ಶಿಸಿದ ಆಲಪ್ಪುಝ ನಿವಾಸಿ ವಿಷ್ಣು ದೇವ್ (29) ಎಂಬಾತನಿಗೆ ವಿಧಿಸಲಾದ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಿ ದಮಾಂ ನ್ಯಾಯಾಲಯ ತೀರ್ಪು ನೀಡಿದೆ.

ಜುಬೈಲ್ ನಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದ ವಿಷ್ಣು ದೇವ್ , ವಿದೇಶೀ ಮಹಿಳೆಯೋರ್ವಳ ಟ್ವೀಟ್ಗೆ ಮರು ಟ್ವೀಟ್ ನೀಡುತ್ತಾ ಪ್ರವಾದಿ (ಸ) ರನ್ನು ಅತ್ಯಂತ ಕೆಟ್ಟದಾಗಿ ಪರಾಮರ್ಶಿಸಿದ್ದ.

ಐದು ವರ್ಷ ಸಜೆ ಮತ್ತು ಒಂದುವರೆ ಲಕ್ಷ ರಿಯಾಲ್ ದಂಡವನ್ನು ಪಾವತಿಸುವಂತೆ ಆತನ ವಿರುದ್ದ ದಮಾಂ ಕ್ರಿಮಿನಲ್ ನ್ಯಾಯಾಲಯ ತೀರ್ಪು ನೀಡಿತ್ತು.

ವಿಶ್ವದಾದ್ಯಂತ ನೆಲೆಸಿರುವ ಮುಸ್ಲಿಮರನ್ನು ಅವಹೇಳನ ಮಾಡಿರುವ ಆರೋಪಿಗೆ ವಿಧಿಸಿರುವ ಶಿಕ್ಷೆ ಸಾಲದು ಎಂದು ವ್ಯಕ್ತಪಡಿಸುತ್ತಾ ಪ್ರೊಸಿಕ್ಯೂಷನ್ ಉನ್ನತ ನ್ಯಾಯಾಲಕ್ಕೆ ದಾವೆ ಸಲ್ಲಿಸಿತ್ತು.

ಉನ್ನತ ನ್ಯಾಯಾಲಯವು ಪ್ರೊಸಿಕ್ಯೂಷನ್ ವಾದವನ್ನು ಮನ್ನಿಸುತ್ತಾ ಆರೋಪಿಗೆ ಹತ್ತು ವರ್ಷಗಳ ಕಾರಾಗ್ರಹ ಶಿಕ್ಷೆ ನೀಡುತ್ತಾ ತೀರ್ಪಿತ್ತಿದೆ. ಆರೋಪಿ ಮುಸ್ಲಿಂ ಅಲ್ಲದ ಕಾರಣಕ್ಕಾಗಿ ಮಾತ್ರ ಈ ಪ್ರಕರಣವನ್ನು ಕೊನೆಗಾಣಿಸುತ್ತಿದ್ದು, ಆತ ಮುಸ್ಲಿಂ ಆಗಿದ್ದರೆ ಮರಣದಂಡನೆ ವಿಧಿಸಲಾಗುತ್ತಿತ್ತು ಎಂದು ಮೂರು ಮಂದಿಯ ಡಿವಿಜನ್ ಪೀಠದ ಉನ್ನತ ನಾಯಕ ಶೈಖ್ ಅಹ್ಮದುಲ್ ಖುರೈನಿ ವಿಧಿ ನಿರ್ಣಯದಲ್ಲಿ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com