ಜ:26 ,27 ರಂದು ಬೆಂಗಳೂರಿನಲ್ಲಿ ನಡೆಯುವ ಉಂದುಲುಸ್ ರಾಜ್ಯ ಪ್ರತಿನಿಧಿ ಸಮಾವೇಶಕ್ಕೆ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ನಿಂದ ದ್ವಜ ಹಸ್ತಾಂತರ
ಎಸ್ಸೆಸ್ಸೆಫ್ ರಾಜ್ಯ ಪ್ರತಿನಿಧಿ ಸಮಾವೇಶ ಉಂದುಲುಸ್ ಕಾರ್ಯಕ್ರಮಕ್ಕೆ ರಾಜ್ಯದ 30 ಪ್ರಮುಖ ದರ್ಗಾಗಳಿಂದ SSF ದ್ವಜಗಳನ್ನು ಝಿಯಾರತ್ ಮಾಡಿಸಿ ಸಮ್ಮೇಳನ ನಗರಕ್ಕೆ ತರುವಂತೆ ರಾಜ್ಯ ಸಮಿತಿ ನಿರ್ದೇಶಿಸಿದ್ದು,
ಅದರ ಪ್ರಕಾರ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಗೆ ನೀಡಲ್ಪಟ್ಟ ಧ್ವಜವನ್ನು ಇಂದು (24-1-2019)
ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿಹೊಂದಿದ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ. ಸಿ)
ಉಳ್ಳಾಲ ದರ್ಗಾದಲ್ಲಿ ಎಸ್ಸೆಸ್ಸೆಫ್ ದ ಕ ಜಿಲ್ಲಾ ಸಮಿತಿಯ ಉಪಾದ್ಯಕ್ಶ ರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ರ ನೇತ್ರತ್ವದಲ್ಲಿ ಝಿಯಾರತ್ ನಡೆಸಿ.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ನ ಅಧ್ಯಕ್ಶ ರಾದ ಎಸ್ ಎಮ್ ಖುಬೈಬ್ ತಂಗಳ್ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ರಾದ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಲ ಇವರಿಗೆ ದ್ವಜವನ್ನು
ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಟ್ರಸ್ಠ್ ನ ಕಾರ್ಯದರ್ಶಿ
ಆಸಿಫ್ ಅಬ್ದುಲ್ಲಾ , ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ನ ಪ್ರ ಕಾರ್ಯದರ್ಶಿ ಹಮೀದ್ ತಲಪಾಡಿ, ಕಾರ್ಯದರ್ಶಿ ಜಾಫರ್ ಯು ಎಸ್ ಅಳೇಕಲ, ಕ್ಯಾಂಪಸ್ ಕಾರ್ಯದರ್ಶಿ ಮುಸ್ತಫ ಮಾಸ್ಟರ್ ಮುಕ್ಕಚೇರಿ, ಡಿವಿಶನ್ ನಾಯಕ ಇಲ್ಯಾಸ್ ಪಿಲಿಕೂರು, ಎಸ್ ವೈ ಎಸ್ ಉಳ್ಳಾಲ ಸೆಂಟರ್ ನಾಯಕ ಅಬ್ದುರ್ರಹ್ಮಾನ್ ಅಕ್ಕರಕರೆ, ಎಸ್ಸೆಸ್ಸೆಫ್ ಸುಂದರಿಬಾಗ್ ಶಾಖೆಯ ಅಧ್ಯಕ್ಶ ರಿಲ್ವಾನ್, ಎಸ್ಸೆಸ್ಸೆಫ್ ಪಟ್ಲ ಶಾಖೆಯ ಅಧ್ಯಕ್ಶ ನಝೀರ್ ಪಟ್ಲ, ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ಪ್ರ ಕಾರ್ಯದರ್ಶಿ ಕಲಂದರ್ ಮುಂತಾದವರು ಉಪಸ್ಥಿತರಿದ್ದರು.
ಜನವರಿ 26 ರಂದು ಬೆಳಿಗ್ಗೆ ಬೆಂಗಳೂರು ಉಂದುಲುಸ್ ಸಮ್ಮೇಳನ ನಗರದಲ್ಲಿ ಪ್ರಮುಖ ನಾಯಕರು ಈ ಧ್ವಜವನ್ನು ಆರೋಹಣಗೈಯ್ಯಲಿದ್ದಾರೆ.