ಮಜೂರು: ಅಕ್ಟೋಬರ್ 26; ಎಸ್ಸೆಸ್ಸೆಫ್ ರಾಜ್ಯ ಸಮಿತಿ ನಿರ್ದೇಶಾನುಸಾರ ರಾಜ್ಯಾದ್ಯಂತ ವಿರುವ ಸಾವಿರಕ್ಕೂ ಮಿಕ್ಕ ಶಾಖೆಗಳಲ್ಲಿ ನಡೆಯುತ್ತಿರುವ ಇದರ ಒಂದು ಭಾಗವಾಗಿ ಎಸ್ಸೆಸ್ಸೆಫ್ ಮಜೂರು ಶಾಖೆ & ಎಸ್ಸೆಸ್ಸೆಫ್ ಕೊಂಬಗುಡ್ಡೆ ಶಾಖೆ ಜಂಟಿಯಾಗಿ ಮಹ್’ಳರತುಲ್ ಬದ್ರಿಯ್ಯಃ ಮಜ್ಲಿಸ್ ಹಾಗೂ ಯುನಿಟ್ ಕಾನ್ಫರೆನ್ಸ್ ಕಾರ್ಯಕ್ರಮ ಅಕ್ಟೋಬರ್ 27 ಶನಿವಾರ (ನಾಳೆ) ರಾತ್ರಿ 07 ಗಂಟೆಗೆ ಸರಿಯಾಗಿ ಕೊಂಬಗುಡ್ಡೆ ಮೊಯ್ಯೊಟ್ಟು ಶಂಸುದ್ದೀನ್ ಮನೆ ವಠಾರದಲ್ಲಿ ಮರ್ಹೂಂ ಹಾಜಿ ಕುಂಞ ಅಹ್ಮದ್ ಮುಕ್ರಿ ವೇದಿಕೆಯಲ್ಲಿ ನಡೆಯಲಿದೆ.
ದಾರುಲ್ ಅಮಾನ್ ಎಜ್ಯುಕೇಶನ್ ಸೆಂಟರ್ ಎಲ್ಲೂರು ಸಾರಥಿ ಅಲ್ಹಾಜ್ ಸಲೀಂ ಮದನಿ ಕುತ್ತಾರ್ ದುಆಃ ಆಶೀರ್ವಚನಗೈಯ್ಯಲಿದ್ದು, ಸುನ್ನೀ ಮದ್’ರಸ ಅಧ್ಯಾಪಕರ ಒಕ್ಕೂಟ ಕಾಪು ರೇಂಜ್ ಅಧ್ಯಕ್ಷ ಅಲ್ಹಾಜ್ ಎಂ.ಕೆ. ಅಬ್ದುರ್ರಶೀದ್ ಕಾಮಿಲ್ ಸಖಾಫಿ ಮಜೂರು ಉದ್ಘಾಟಿಸಲಿದ್ದಾರೆ. ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕ ಜನರಲ್ ಕನ್ವೀನರ್ ಅಲ್ಹಾಜ್ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಪ್ರ.ಕಾರ್ಯದರ್ಶಿ ಅಬೂ ಸುಫ್ಯಾನ್ ಇಬ್ರಾಹಿಂ ಮದನಿ ಕಾಟಿಪಳ್ಳ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.
ಮಜೂರು ಬದ್ರಿಯ ಜುಮುಅ ಮಸ್ಜಿದ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ಹಮೀದ್, ಎಸ್ಸೆಸ್ಸೆಫ್ ಕಾಪು ಡಿವಿಷನ್ ಅಧ್ಯಕ್ಷ ಮುಹಿಯ್ಯುದ್ದೀನ್ ಸಖಾಫಿ ಪೈಯ್ಯಾರು, ಎಸ್.ವೈ.ಎಸ್. ಕಾಪು ಸೆಂಟರ್ ಪ್ರ.ಕಾರ್ಯದರ್ಶಿ ಯಹ್’ಕೂಬ್ ಸಖಾಫಿ ಕೊಂಬಗುಡ್ಡೆ, ಎಸ್ಸೆಸ್ಸೆಫ್ ಉಚ್ವಿಲ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಹನೀಫಿ, ಶಿರ್ವ ಸೆಕ್ಟರ್ ಅಧ್ಯಕ್ಷ ಸಲೀಂ ಪಕೀರ್ಣಕಟ್ಟೆ, ಎಸ್.ಎಂ.ಎ. ಕರ್ನಾಟಕ ಉಪಾಧ್ಯಕ್ಷ ಮುಹಿಯ್ಯುದ್ದೀನ್ ಹಾಜಿ ಗುಡ್’ವೀಲ್, ಎಸ್.ವೈ.ಎಸ್. ಮಜೂರು ಬ್ರಾಂಚ್ ಅಧ್ಯಕ್ಷ ಮುಹಮ್ಮದ್ ಕರಂದಾಡಿ, ಎಸ್ಸೆಸ್ಸೆಫ್ ಕೊಂಬಗುಡ್ಡೆ ಶಾಖಾ ಅಧ್ಯಕ್ಷ ಫೈಝಲ್ ಕೊಂಬಗುಡ್ಡೆ, ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಸ್ಸೆಸ್ಸೆಫ್ ಮಜೂರು ಶಾಖಾ ಅಧ್ಯಕ್ಷ ಹುಸೈನ್ ಮಜೂರು ಅಧ್ಯಕ್ಷತೆ ವಹಿಸಲಿದ್ದಾರೆ. ದಫ್ ಉಸ್ತಾದ್ ಬಶೀರ್ ಮುಸ್ಲಿಯಾರ್ ಮಹ್’ಳರತುಲ್ ಬದ್ರಿಯ್ಯಃ ನೇತೃತ್ವ ವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಮಜೂರು ಮೀಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
_ಪ್ರಕಟಣೆ’:- PMS Padubidri_