ಬಾಯರ್ ಮುಜಮ್ಮ ಉಸ್ಸಖಾಫತಿ ಸುನ್ನಿಯ್ಯಾ ಬಹರೈನ್ ಕಮಿಟಿ ವತಿಯಿಂದ ಸೆಪ್ಟೆಂಬರ್ 14 ಶುಕ್ರವಾರ ದಂದು ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಆತ್ಮೀಯ ಸಮ್ಮೇಳನಕ್ಕೆ, ಅಧುನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಜೀವಿಸುತ್ತಿರುವ ಯುವ ಪೀಳಿಗೆಯನ್ನು ತನ್ನ ಅಧ್ಬುತವಾದ ವಾಕ್ ಚಾತುರ್ಯ ದಿಂದ ಉಪದೇಶ ನೀಡುತ್ತಿರುವ ಯುವ ವಿದ್ವಾಂಸ, ಯಾವ ಡಾಕ್ಟರ್ ಗಳಿಗೂ ಪರಿಹಾರವಾಗದ ಅದೆಷ್ಟೋ ರೋಗಗಳನ್ನು ಹಾಗೂ ಸಮಸ್ಯೆಗಳನ್ನು ತನ್ನ ಭಕ್ತಿ ಪೂರ್ವಕ ಸ್ವಲಾತ್ ಮಜ್ಲಿಸ್ ನಿಂದ ಪರಿಹರಿಸಿದ ನೊಂದವರ ಅಶಾಕಿರಣ, ಅಶಿಖ್ ರ್ರಸೂಲ್ ಅಸೈಯ್ಯಿದ್ ಬಾಯರ್ ತಂಙಳ್ ಗಣ್ಯ ನೇತೃತ್ವ ನೀಡಲಿದ್ದಾರೆ, ಅದ್ದರಿಂದ ಸರ್ವ ಸಂಘಟನಾ ಮಿತ್ರರು, ಪ್ರವಾದಿ ಪ್ರೇಮಿಗಳು, ಹಾಗೂ ಸರ್ವ ಕಾರ್ಯಕರ್ತರು ಸೆಪ್ಟೆಂಬರ್ 14 ಶುಕ್ರವಾರ ರಾತ್ರಿ 8 ಗಂಟೆಗೆ ಪಾಕಿಸ್ತಾನ ಕ್ಲಬ್ ಮನಾಮದಲ್ಲಿ ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಗೆ ಹಾಗೂ ಆತ್ಮೀಯ ಸಮ್ಮೇಳನಕ್ಕೆ ಬಂದು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕಾಗಿ ಬಾಯರ್ ಮುಜಮ್ಮ ಉಸ್ಸಖಾಫತಿ ಸುನ್ನಿಯ್ಯಾ ಬಹರೈನ್ ಕಮಿಟಿಯ ಆಡಳಿತ ಮಂಡಳಿಯು ಕರೆ ನೀಡಿದ್ದಾರೆ.