ಮನ್-ಶರ್ ಗ್ರೂಪ್ ಅಧೀನದಲ್ಲಿ ಜಾಮಿಯತುಲ್ ಹಿಂದ್ ಸಿಲೆಬಸ್ ಪ್ರಕಾರ ಆಲಿಮತ್ ಗಳನ್ನು ಸಮಾಜಕ್ಕೆ ಅರ್ಪಿಸುವ 8ವರ್ಷಗಳ ಹೊಸ ಸಂಭ್ರಮವಾದ ಮನ್-ಶರಿಯ್ಯಾ ಕೋರ್ಸ್ ಗೆ ಝೈನುಲ್ ಉಲಮಾ ಮಾಣಿ ಉಸ್ತಾದ್ ಮನ್-ಶರ್ ಸ್ಕೂಲ್ ಕ್ಯಾಂಪಸ್ ಗೇರುಕಟ್ಟೆಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೆಯರ್ಮ್ಯಾನ್ ಸಯ್ಯದ್ ಉಮರ್ ಅಸ್ಸಖಾಫ್ ನೇತ್ರತ್ವ ವಹಿಸಿ ಮಾತನಾಡಿ ಮಹಿಳೆಯರು ಶೈಕ್ಷಣಿಕವಾಗಿ ಉನ್ನತಿಗೇರಬೇಕಾದ ಅನಿವಾರ್ಯತೆ ಹಾಗೂ ಇಸ್ಲಾಮಿಕ್ ವಿಙಾನವನ್ನು ಕರಗತಮಾಡಿಕೊಳ್ಳುವ ಅನಿವಾರ್ಯತೆಯ ಕುರಿತು ಮಾತನಾಡಿದರು.
ಮನ್-ಶರಿಯ್ಯಾ ಪ್ರಥಮ ಬ್ಯಾಚ್ ಗೆ ಝೈನುಲ್ ಉಲಮಾ ಕಿತಾಬ್ ಹೇಳಿ ಕೊಡುವ ಮೂಲಕ ಅಧಿಕ್ರತವಾಗಿ ಚಾಲನೆ ನೀಡಿ ಮನ್-ಶರ್ ಸಂಸ್ಥೆ ಈ ಸಣ್ಣ ಪ್ರಾಯದಲ್ಲಿ ಬೆಳೆದು ಬಂದ ರೀತಿ ಅಧ್ಭುತವಾಗಿದ್ದು ಮನ್-ಶರ್ ತಂಙಲರ ಮಾದರಿಯುಕ್ತವಾದ ಸಧೈರ್ಯ ಹೆಜ್ಜೆಗಳು ಮನ್-ಶರ್ ಹೆಸರೇ ಸೂಚಿಸುವಂತೆ ಹರಡಿಸುವಿಕೆ ಎಂಬಂತೆ ಕರ್ನಾಟಕದಾದ್ಯಂತ ವಿಙಾನವನ್ನು ಹರಡಿಸುವಲ್ಲಿ ಯಶಸ್ವಿಯಾಗಿರುವುದಲ್ಲದೆ ಸಯ್ಯದರ ಧೈರ್ಯವು ನಮಗೆಲ್ಲ ಮಾದರಿಯುಕ್ತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನ್-ಶರ್ ಎಜು-ವಿಲೇಜ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಕೆ.ಸಿ.ಎಫ್ ರಾಷ್ಟ್ರೀಯ ನಾಯಕರಾದ ಶೇಖ್ ಬಾವಾ ಮಂಗಳೂರು ಮಾತನಾಡಿ ಕರ್ನಾಟಕದ ಅಭಿಮಾನ ಕೇಂದ್ರವಾಗಿ ಮಾರ್ಪಾಡಾಗುತ್ತಿರುವ ಮನ್-ಶರ್ ಸಂಸ್ಥೆಯಲ್ಲಿ ನಾವೂ ಭಾಗವಾಗಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ಮನ್-ಶರ್ ಸ್ಕೂಲ್ ಮ್ಯಾನೇಜರ್ ಸಯ್ಯದ್ ಆಬಿದ್ ಅಸ್ಸಖಾಫ್ ಮಾತನಾಡಿ ಮನ್-ಶರ್ ಹೆಜ್ಜೆಗಳ ಕುರಿತು ಬೆಳಕು ಚೆಲ್ಲಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮನ್-ಶರ್ ಅಕಾಡೆಮಿಕ್ ಡೈರೆಕ್ಟರ್ ವಸಂತ ಕುಮಾರ್ ನಿಟ್ಟೆ ಪ್ರಾಸ್ಥಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮನ್-ಶರ್ ಅರಬಿಕ್ ಸ್ಕೂಲ್ ಮುಖ್ಯಸ್ಥರಾದ ಉಸ್ಮಾನ್ ಸಖಾಫಿ ,ಮನ್-ಶರ್ ಸಿಧ್ರಾ ಮ್ಯಾನೇಜರ್ ಅಬ್ದುಲ್ಲ ಸಖಾಫಿ ನಿಂತಿಕಲ್,ಮನ್-ಶರ್ ಫೆಮಿನಕ್ಸ್ ಝೋನ್ ಮ್ಯಾನೇಜರ್ ನಝೀರ್ ಅಹ್ಸನಿ ,ಮನ್-ಶರ್ ಸಿಧ್ರಾ ಮುದರಿಸ್ ರಶೀದ್ ಯಮನಿ ಗಣ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಂಸ್ಥೆಯ ಫ್ರಧಾನ ಕಾರ್ಯದರ್ಶಿ ಸ್ವಾಧಿಕ್ ಮಲೆಬೆಟ್ಟು ಅತಿಥಿಗಳನ್ನು ಸ್ವಾಗತಿಸಿ ಸ್ಕೂಲ್ ನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ ವಂದಿಸಿದರು.