janadhvani

Kannada Online News Paper

ಸರ್ಕಾರಿ ನೌಕರರು ತಮ್ಮ ಪೋಷಕರನ್ನು ಕಡೆಣಿಸಿದರೆ ವೇತನ ಕಡಿತ

ಗುವಾಹಟಿ,ಜು.28: ಸರ್ಕಾರಿ ನೌಕರರು ತಮ್ಮ ಪೋಷಕರನ್ನು, ಒಡಹುಟ್ಟಿದ ವಿಕಲಾಂಗರನ್ನು ಕಡೆಣಿಸಿದರೆ ಅಂಥವರ ವೇತನ ಕಡಿತ.ಹೆತ್ತವರನ್ನು ಕಡೆಗಣಿಸುತ್ತಿರುವ ಈ ಕಾಲಘಟ್ಟದಲ್ಲಿ ಅಸ್ಸಾಂ ಸರ್ಕಾರ ಹೊಸ ಕಾನೂನೊಂದನ್ನು ರೂಪಿಸಿದೆ.

ಪೋಷಕರು ಹಾಗೂ ಒಡಹುಟ್ಟಿದವರನ್ನು ಕಡೆಗಣಿಸಿದರೆ ಅಂಥವರ ಸಂಬಳವನ್ನು ಕಟ್ ಮಾಡಲು ಅಸ್ಸಾಂ ಸರ್ಕಾರ ಮುಂದಾಗಿದ್ದು ಈ ಯೋಜನೆ ಅಕ್ಟೋಬರ್ 2 ರಿಂದ ಜಾರಿಗೆ ತರಲು ಮುಂದಾಗಿದೆ. ಈ ಹೊಸ ಕಾನೂನಿನಲ್ಲಿ ಯಾವುದೇ ಆದಾಯವಿರದ ಪೋಷಕರು ಹಾಗೂ ದಿವ್ಯಾಂಗ ಸಹೋದರ ಹಾಗೂ ಸಹೋದರಿಯರನ್ನು ಸರ್ಕಾರಿ ನೌಕರರು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಒಂದು ತಿಂಗಳ ವೇತನದಲ್ಲಿ ಶೇ. 10 – 15 ರಷ್ಟು ಕಡಿತ ಮಾಡಲಿದೆ ಎಂದು ಹೇಳಲಾಗಿದೆ.  ಇನ್ನು ಅಸ್ಸಾಂ ಈ ಕಾನೂನೂ ದೇಶವ್ಯಾಪ್ತಿ ವಿಸ್ತರಣೆ ಮಾಡುವಂತೆ ಕೇಳಿ ಬಂದಿದ್ದು, ಪೋಷಕರು ವೃದ್ದಾಶ್ರಮಗಳಿಗೆ ಹೋಗುವುದು ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

error: Content is protected !! Not allowed copy content from janadhvani.com