ಕುವೈತ್ ಸಿಟಿ: ವಿದೇಶೀಯರು ನಕಲಿ ದಾಖಲೆಗಳನ್ನು ನೀಡಿ ಪಡೆದ ಪರವಾನಗಿಗಳನ್ನು ರದ್ದು ಪಡಿಸಲು ಕುವೈತ್ ಗೃಹ ಸಚಿವಾಲಯದ ಸಾರಿಗೆ ಅಂಡರ್ ಕಾರ್ಯದರ್ಶಿ ಮೇಜರ್ ಜನರಲ್ ಫಹದ್ ಅಲ್ ಸುವೆಯ್ವೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
600 ಕುವೈತಿ ದಿನಾರ್ ಮಾಸಿಕ ಸಂಬಳ, ವಿಶ್ವವಿದ್ಯಾಲಯ ಪದವಿ, ಮತ್ತು ಕುವೈಟ್ ನ ಎರಡು ವರ್ಷಗಳ ಇಖಾಮಾ ಮುಂತಾದ ನಕಲಿ ದಾಖಲೆಯನ್ನು ನೀಡಿ ಚಾಲನಾ ಪರವಾನಗಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.ಚಾಲನಾ ವ್ಯವಸ್ಥೆಯನ್ನು ಪಾಲಿಸದೆ ನಕಲಿ ದಾಖಲೆಗಳನ್ನು ಬಳಸಿ ಪರವಾನಗಿ ಪಡೆದವರಿದ್ದಾರೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವರ್ಷ ಚಾಲನಾ ಪರವಾನಗಿಗಳಿಗಾಗಿ 1,65,724 ವಿದೇಶೀಯರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅವಧಿಯಲ್ಲಿ 49,644 ಸ್ಥಳೀಯ ನಾಗರಿಕರು ಮಾತ್ರ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
2017 ರ ವೇಳೆಗೆ ದೇಶದ ಒಟ್ಟು ಕಾರುಗಳ ಸಂಖ್ಯೆ 16,70,335 ಆಗಿದೆ. ದೇಶದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸರ್ಕಾರ ಗಂಭೀರ ಪರಿಹಾರದ ಮಾರ್ಗಸೂಚಿಗಳನ್ನು ಕಂಡುಕೊಳ್ಳಲು ಅಧ್ಯಯನಗಳಲ್ಲಿ ತೊಡಗಿ ಕೊಂಡಿದೆ.
ಆದರೆ, ಟ್ರಾಫಿಕ್ ಜಾಮ್ ತಪ್ಪಿಸುವ ಸಲುವಾಗಿ ವಿದೇಶೀಯರಿಗೆ ಒಂದಕ್ಕಿಂತ ಹೆಚ್ಚಿನ ವಾಹನಗಳನ್ನು ನೋಂದಣಿ ಮಾಡಲು ಅನುಮತಿ ನೀಡಬಾರದು, ಹಳತಾದ ವಾಹನಗಳಿಗೆ ಮರು ನೋಂದಣಿ ನೀಡ ಕೂಡದು, ಮುಂತಾದ ಕಠಿಣ ನಿರ್ದೇಶನಗಳನ್ನು ಕುವೈತ್ ಉಪ ಪ್ರಧಾನಿ, ವಿದೇಶಾಂಗ ಸಚಿವ ಶೇಖ್ ಖಾಲಿದ್ ಅಲ್ ಜೆರಾಹ್ ಅವರಿಗೆ ಸಂಬಂಧಿಸಿದ ಅಧಿಕಾರಿಗಳು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.