janadhvani

Kannada Online News Paper

ಅಲ್ ಮದೀನದಲ್ಲಿ ವಿಜೃಂಭಿಸಿದ ವಿದ್ಯಾರ್ಥಿಗಳ ಸಾಹಿತ್ಯ–ಸಾಂಸ್ಕೃತಿಕ ಸಂಗಮ ‘ಗುಲ್ಶನ್’

ನರಿಂಗಾನ: ಮಂಜನಾಡಿಯ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆ ‘ಹಿಬ್ರ್ ಹಾಲ್ ಆಫ್ ಎಕ್ಸೆಲೆನ್ಸ್’ನ ವಿದ್ಯಾರ್ಥಿಗಳ 7ನೇ ಆವೃತ್ತಿಯ ಸಾಹಿತ್ಯ–ಸಾಂಸ್ಕೃತಿಕ ಪ್ರತಿಭಾ ಸಂಗಮ ‘ಗುಲ್ಶನ್’ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

‘ಸುಪಥ’ ಎಂಬ ಶೀರ್ಷಿಕೆ ಹಾಗೂ ‘ಗತದ ಮೆಲುಕು ಭವಿಷ್ಯದ ಬೆಳಕು’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾದ ಈ ಪ್ರತಿಭಾ ಸಂಗಮದಲ್ಲಿ ಐದು ವಿಚಾರಗೋಷ್ಠಿಗಳು ಹಾಗೂ ನೂರಕ್ಕೂ ಅಧಿಕ ವೈವಿಧ್ಯಮಯ ಸ್ಪರ್ಧೆಗಳು ಗಮನ ಸೆಳೆದವು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲ ಸಯ್ಯಿದ್ ಉವೈಸ್ ಅಸ್ಸಖಾಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಮೂರು ದಿನಗಳ ಕಾಲ ನಡೆದ ವಿವಿಧ ವಿಚಾರಗೋಷ್ಠಿಗಳಲ್ಲಿ ಖ್ಯಾತ ಚಿಂತಕ ಶುಹೈಬುಲ್ ಹೈತಮಿ, ಕನ್ನಡ ಭಾಷಾ ವಿದ್ವಾಂಸ ಹಾಗೂ ಸಂಶೋಧಕ ಪ್ರೊ. ಮೇಟಿ ಮಲ್ಲಿಕಾರ್ಜುನ್, ಮುಡಿಪು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಹೈದರ್ ಅಲಿ, ಹಾಫಿಝ್ ಶರೀಫ್ ಕಾಮಿಲ್ ಸಖಾಫಿ ಮಳಲಿ, ಝೈನುದ್ದೀನ್ ಇನೋಳಿ, ಅಬ್ದುರ್ರಝಾಕ್ ನಾವೂರು ಹಾಗೂ ನ್ಯಾಯವಾದಿ ನೌಫಲ್ ಮರ್ಝೂಖಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿದರು.
ಕೇರಳದ ಮುಬಶ್ಶಿರ್ ಹಾಗೂ ಅಝರ್ ಕಲ್ಲೂರ್ ಅವರ ನೇತೃತ್ವದಲ್ಲಿ ನಡೆದ ವಿಶೇಷ ‘ಇಶಲ್ ನೈಟ್’ ಕಾರ್ಯಕ್ರಮವು ಸಾಹಿತ್ಯ–ಸಾಂಸ್ಕೃತಿಕ ಸಂಗಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಕಾನರ ತಂಡಕ್ಕೆ ಚಾಂಪಿಯನ್ ಪಟ್ಟ

ಮಲಬಾರ್, ಮಅಬರ್ ಹಾಗೂ ಕಾನರ ಎಂಬ ಮೂರು ತಂಡಗಳ ನಡುವೆ ನಡೆದ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾನರ ತಂಡವು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಲಬಾರ್ ತಂಡ ದ್ವಿತೀಯ ಹಾಗೂ ಮಅಬರ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ವೈಯಕ್ತಿಕ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ಪೈಕಿ ನಿಝಾರ್ ಉರುವಾಲು ಪದವು ಹಾಗೂ ಕಿರಿಯ ವಿದ್ಯಾರ್ಥಿಗಳ ಪೈಕಿ ಇಶಾನ್ ಕುಂದಾಪುರ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಮುಹಮ್ಮದ್ ಕುಂಞಿ ಅಂಜದಿ, ಅಬ್ದುರ್ರಹ್ಮಾನ್ ಅಹ್ಸನಿ ಮುಕ್ಕಂ, ಅಬ್ದುಲ್ಲಾ ಅಹ್ಸನಿ ಪುಂಜಾಲಕಟ್ಟೆ, ಅಬೂಸ್ವಾಲಿಹ್ ಅಲ್ ಅಝ್ಹರಿ, ಅಬ್ದುಲ್ ಖಾದರ್ ಝುಹ್ರಿ, ಅಬ್ದುರ್ರಹ್ಮಾನ್ ಮರ್ಝೂಕಿ ಅಲ್ ಅಹ್ಸನಿ, ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ಇರ್ಷಾದ್ ಸಖಾಫಿ ಅಲ್ ಅಝ್ಹರಿ, ಇಕ್ಬಾಲ್ ಮರ್ಝೂಕಿ ಅಸ್ಸಖಾಫಿ, ಹಾಫಿಝ್ ಶಾಹುಲ್ ಹಮೀದ್ ಹಿಮಮಿ, ಹಾಫಿಝ್ ಮುಆಝ್ ಹಿಮಮಿ, ಜುನೈದ್ ಮರ್ಝೂಕಿ ಜೆ.ಟಿ., ರಶೀದ್ ಮುಸ್ಲಿಯಾರ್, ಝೈನುಲ್ ಆಬಿದ್ ಸಖಾಫಿ, ಹಝ್ರತ್ ಅಬ್ರಾರ್, ಅಬ್ದುಲ್ ರಊಫ್ ಮುಸ್ಲಿಯಾರ್, ನೌಶಾದ್ ಅಲಿ ಮರ್ಝೂಖಿ ಹಾಗೂ ಹಸೈನಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಗುಲ್ಶನ್ ಸ್ವಾಗತ ಸಮಿತಿಯ ಅಧ್ಯಕ್ಷ ಮುಝಮ್ಮಿಲ್ ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕ ಝೈದ್ ಅಡ್ಕರೆ ಸ್ವಾಗತಿಸಿದರು. ಮುಬ್ತಶಿಂ ಮರ್ಝೂಖಿ ಹಾಗೂ ಮುತವ್ವಲ್ ವಿದ್ಯಾರ್ಥಿ ಲುಕ್ಮಾನ್ ಮದನಿ ನಗರ ಕಾರ್ಯಕ್ರಮ ನಿರೂಪಿಸಿದರು. ಅಸೀಲ್ ಕಿನ್ಯ ವಂದಿಸಿದರು.
ವಿದ್ಯಾರ್ಥಿಗಳಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸೃಜನಶೀಲ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯಾದ ಮೂರು ದಿನಗಳ ‘ಗುಲ್ಶನ್’ ಪ್ರತಿಭಾ ಸಂಗಮವು ವಿವಿಧ ವಿಚಾರಗೋಷ್ಠಿಗಳು, ಕಲಾ ಪ್ರದರ್ಶನಗಳು ಹಾಗೂ ಸ್ಪರ್ಧೆಗಳೊಂದಿಗೆ ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ಇದನ್ನೂ ಓದಿರಿ...