ಕಾಪು: ಅಕ್ಟೋಬರ್ 26; ಮಹೋನ್ನತ ಅವುಲಿಯಾ ಶಿರೋಮಣಿಗಳಿಂದ ಸ್ಥಾಪಿತಗೊಂಡ ಸಮಸ್ತ ಎಂಬ ಪ್ರಸ್ಥಾನ 100 ವರ್ಷಗಳನ್ನು ಪೂರ್ತಿಗೊಳಿಸುವ ಈ ಸಂದರ್ಭದಲ್ಲಿ ನೂರು ಪ್ರಕಾಶಮಾನ ವರ್ಷಗಳ ಪ್ರಯುಕ್ತ “ಸಮಸ್ತ ಸೆಂಟಿನರಿ” ಭಾಗವಾಗಿ ಸುನ್ನೀ ಉಲಮಾ ಒಕ್ಕೂಟ ಹಾಗೂ ಜಿಲ್ಲಾ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಸಂಯುಕ್ತ ಆಶ್ರಯದಲ್ಲಿ “ಸಮಸ್ತ; ತಾತ್ವಿಕ ಸಮಾವೇಶ” ಐತಿಹಾಸಿಕವಾಗಿ ಅಕ್ಟೋಬರ್ 27 ಮಂಗಳವಾರ (ಇಂದು) ಸಾಯಂಸಂಜೆ 05 ಗಂಟೆಯಿಂದ ಇನಾಸನ್ ಆಡಿಟೋರಿಯಂ ಕೊಪ್ಪಲಂಗಡಿ – ಕಾಪುವಿನಲ್ಲಿ ನಡೆಯಲಿದೆ.
ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್, ಬದ್ರುಸ್ಸಾದತ್ ಸಯ್ಯಿದ್ ಕಡಲುಂಡಿ ತಂಙಳ್, ಸಯ್ಯಿದ್ ಕುಂಬೋಳ್ ತಂಙಳ್, ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದ್, ಶೈಖುನಾ ಪೇರೋಡ್ ಉಸ್ತಾದ್, ಮೌಲಾನ ಡಾ. ಕಾವಳಕಟ್ಟೆ ಹಝ್ರತ್, ಸಯ್ಯಿದ್ ಕೋಟೇಶ್ವರ ತಂಙಳ್ ಸಹಿತ ಸಂಘಟನಾ ಪ್ರಮುಖ ನಾಯಕರು, ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಈ ಒಂದು ಸಮಸ್ತ ತಾತ್ವಿಕ ಸಮಾವೇಶ ಐತಿಹಾಸಿಕವಾಗಿ ವಿಜಯಗೊಳಿಸಲು ಸಂಘಟನಾ ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ಕಾಪು ಡಿವಿಷನ್ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಡಿವಿಷನ್ ಮೀಡಿಯಾ ಕಾರ್ಯದರ್ಶಿ ವರದಿ ಮಾಡಿದ್ದಾರೆ.
*ಮೀಡಿಯಾ ಕಾರ್ಯದರ್ಶಿ*
ಎಸ್ಸೆಸ್ಸೆಫ್ ಕಾಪು ಡಿವಿಷನ್















ಇನ್ನಷ್ಟು ಸುದ್ದಿಗಳು
ರಾಷ್ಟ್ರಮಟ್ಟದ ಹ್ಯಾಕಥಾನ್ನಲ್ಲಿ ಅಫ್ನಾಜ್ಗೆ ದ್ವಿತೀಯ ಸ್ಥಾನ
ಬಿಳಿ ಬಣ್ಣದ ಮದುವೆ ಉಡುಗೆಯನ್ನು ಹೊದಿಸಿ ಅಸ್ಸಾ ರಮ್ಸಿಗೆ ಕಣ್ಣೀರಿನ ವಿದಾಯ
‘ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ’ ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಶೈಖ್ ಹಮ್ದಾನ್
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ