ರಿಯಾದ್/ಕೊಲಂಬೊ: ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಎಸಗಿದ್ದಾನೆಂಬ ಆರೋಪದ ದೂರಿನ ಮೇರೆಗೆ ಶ್ರೀಲಂಕಾ ಯುವಕನಿಗೆ ವಿಧಿಸಿದ್ದ ವಧೆ ಶಿಕ್ಷೆಯನ್ನು ಸೌದಿ ಅರೇಬಿಯಾ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅನೋಜನ್ ಶಿವರಾಶ (27) ಎಂಬ ಯುವಕನ ವಧೆ ಶಿಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಶ್ರೀಲಂಕಾ ಉಪ ವಿದೇಶಾಂಗ ಸಚಿವ ಅರುಣ್ ಹೇಮಚಂದ್ರ ತಿಳಿಸಿದ್ದಾರೆ.
ಫೇಸ್ಬುಕ್ ಕಮೆಂಟ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಹಿಂದೆ ವಧೆ ಶಿಕ್ಷೆ ವಿಧಿಸಲಾಗಿತ್ತು. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಕಳೆದ ಸೆಪ್ಟೆಂಬರ್ನಲ್ಲಿ ಸೌದಿ ಅಪ್ಪೀಲ್ (ಮೇಲ್ಮನವಿ) ಕೋರ್ಟ್ ಯುವಕನಿಗೆ ವಧೆ ಶಿಕ್ಷೆ ವಿಧಿಸಿತ್ತು. ಈ ಪ್ರಕರಣವು ಶ್ರೀಲಂಕಾದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು ಮತ್ತು ಯುವಕನಿಗೆ ಕ್ಷಮಾದಾನ ದೊರೆಯುವಂತೆ ಮಾಡಲು ರಾಜತಾಂತ್ರಿಕ ಮಟ್ಟದಲ್ಲಿ ಪ್ರಯತ್ನಗಳು ತೀವ್ರಗೊಂಡಿದ್ದವು.
ಜೂನ್ ಕೊನೆಯ ವಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ದೃಶ್ಯಗಳಿಗೆ (ವಿಡಿಯೋಗಳಿಗೆ) ಸಂಬಂಧಿಸಿದಂತೆ ವಿವಾದಗಳು ಪ್ರಾರಂಭವಾದವು. ಇದರ ಬೆನ್ನಲ್ಲೇ ಆನ್ಲೈನ್ನಲ್ಲಿ ಧಾರ್ಮಿಕ ತರ್ಕಗಳು ಹುಟ್ಟಿಕೊಂಡವು. ಶಿವರಾಶ ತಮಿಳು ಭಾಷೆಯಲ್ಲಿ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುವ ರೀತಿಯಲ್ಲಿ ಕಮೆಂಟ್ ಪೋಸ್ಟ್ ಮಾಡಿದ್ದರು ಎಂದು ವರದಿಯಾಗಿದೆ. ಆ ಯುವಕ ನಂತರ ಆ ಕಮೆಂಟ್ ಅನ್ನು ಅಳಿಸಿಹಾಕಿ (ಡಿಲೀಟ್ ಮಾಡಿ), ಕ್ಷಮಾದಾನ ಕೋರುವ ವಿಡಿಯೋವೊಂದನ್ನು ಪ್ರಕಟಿಸಿದ್ದನು. ಆದರೆ ಆ ಕಮೆಂಟ್ನ ಸ್ಕ್ರೀನ್ಶಾಟ್ ಯುವಕನ ಉದ್ಯೋಗದಾತರ ಮತ್ತು ಸೌದಿ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಆತನನ್ನು ಬಂಧಿಸಲಾಗಿತ್ತು.
ಅಲ್-ಅಹ್ಸಾ ಕ್ರಿಮಿನಲ್ ಕೋರ್ಟ್ ಈ ಹಿಂದೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 30 ಲಕ್ಷ ಸೌದಿ ರಿಯಾಲ್ ದಂಡ ವಿಧಿಸಿತ್ತು. ನಂತರ ಮೇಲ್ಮನವಿ ನ್ಯಾಯಾಲಯವು ವಧೆ ಶಿಕ್ಷೆ ವಿಧಿಸಿತ್ತು. ಸುಪ್ರೀಂ ಕೋರ್ಟ್ನ ಹೊಸ ಆದೇಶದ ಕುರಿತು ಹೆಚ್ಚಿನ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಈ ಪ್ರಕರಣದಲ್ಲಿ ಸೌದಿ ಅಧಿಕಾರಿಗಳೊಂದಿಗೆ ಕಾನೂನು ಮಟ್ಟದಲ್ಲಿ ಚರ್ಚೆ ನಡೆಸುತ್ತಿರುವ ಶ್ರೀಲಂಕಾದ ಶಾಸಕ ಫೈಜರ್ ಮುಸ್ತಫಾ ‘ಬಿಬಿಸಿ’ಗೆ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಸಹ ಯುವಕನ ವಧೆ ಶಿಕ್ಷೆಯನ್ನು ಕೈಬಿಡಬೇಕೆಂದು ಆಗ್ರಹಿಸಿದ್ದವು.















ಇನ್ನಷ್ಟು ಸುದ್ದಿಗಳು
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ
ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ
ರಿಯಾದ್ ವಿಮಾನ ನಿಲ್ದಾಣ ದಾಳಿ: ಗಾಯಗೊಂಡವರಲ್ಲಿ 11 ಮಂದಿ ಭಾರತೀಯರು- ಭಾರತೀಯ ರಾಯಭಾರ ಕಚೇರಿ
ಡಿ.ಕೆ. ಎಸ್. ಸಿ. ದ . ಕ. ಜಿಲ್ಲಾ ಸಮಿತಿ ಅಧೀನ ನೂತನ ಸುರತ್ಕಲ್ ಘಟಕದ ಉದ್ಘಾಟನೆ
ದಮ್ಮಾಮ್ ವಿಮಾನ ನಿಲ್ದಾಣದ ಮೇಲೂ ದಾಳಿ- ಅಲ್ ಖರ್ಜ್ ಕಡೆಗೂ ಕ್ಷಿಪಣಿ
ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೂತಿ ದಾಳಿ: 12 ಮಂದಿ ಮೃತ್ಯು, 300ಕ್ಕೂ ಅಧಿಕ ಜನರಿಗೆ ಗಾಯ
ವಿಮಾನ ನಿಲ್ದಾಣಗಳ ಮೇಲೆ ಹೂತಿ ದಾಳಿ : ರಿಯಾದ್ಗೆ ವಿಮಾನ ಸೇವೆ ರದ್ದು
ಸೌದಿಯಲ್ಲಿರುವ ಭಾರತೀಯ ನಾಗರಿಕರು ಜಾಗ್ರತೆ ವಹಿಸಬೇಕು- ಭಾರತೀಯ ರಾಯಭಾರ ಕಚೇರಿ
ರಿಯಾದ್ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಎಚ್ಚರಿಕೆ
ಟ್ರಾವೆಲ್ ಇನ್ಶೂರೆನ್ಸ್ ಇಲ್ಲ; ಉಮ್ರಾ ಮುಗಿಸಿ ಹಿಂತಿರುಗುತ್ತಿದ್ದ ವ್ಯಕ್ತಿಗೆ 20 ಲಕ್ಷ ರೂ. ಆಸ್ಪತ್ರೆ ಬಿಲ್