janadhvani

Kannada Online News Paper

ಡಿಕೆಯಸ್ಸಿ ಝೈದಿ ಘಟಕದ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

ಮಕ್ಕತುಲ್ ಮುಕರ್ರಮಃ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಮಕ್ಕ ವಲಯ ಅಧೀನಕ್ಕೊಳಪಟ್ಟ ಝೈದಿ ಘಟಕದ ಮಹಾಸಭೆ ದಿನಾಂಕ 25, ಜೂನ್ 2026 ಗುರುವಾರ ರಾತ್ರಿ 11 ಕ್ಕೆ ಸರಿಯಾಗಿ ಮಕ್ಕಾದ ಕಾಕ್ಕಿಯ್ಯ ದಲ್ಲಿ ಜರಗಿತು.
ಡಿಕೆಯಸ್ಸಿ ಕೇಂದ್ರ ಆರ್ಗನೈಝರ್ ಉಸ್ತಾದ್ ಅಬ್ದುರ್ರಶೀದ್ ಸಅದಿ ಯವರ ಘನ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಕ್ಕತುಲ್ ಮುಕರ್ರಮ ಝೋನ್ ಸಂವಹಣಾ ಕಾರ್ಯದರ್ಶಿ ಇಬ್ರಾಹೀಂ ಕಣ್ಣಂಗಾರ್ ಆಗಮಿಸಿದ್ದರು. ದುಆದ ಬಳಿಕ
ವಾರ್ಷಿಕ ವರದಿ ಮತ್ತು ಪ್ರವರ್ತನಾ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು.
2026-27 ನೇ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷ: ಅಬ್ದುಲ್ ಮಜೀದ್ ಬಜಾಲ್
ಪ್ರ. ಕಾರ್ಯದರ್ಶಿ: ಅಬ್ದುಲ್ಲ ಬಿ.ಸಿ.ರೋಡ್
ಹಣಕಾಸು ಕಾರ್ಯದರ್ಶಿ:
ಮುಸ್ಥಫ ಮಡಿಕೇರಿ.
10 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನೇಮಕಗೊಂಡರು.
ಸಭೆಯ ಕೊನೆಯಲ್ಲಿ ಮಲಿಕ್ ಇಡ್ಯಾ ಧನ್ಯವಾದಗೈದರು.

ಇದನ್ನೂ ಓದಿರಿ...