ಮಂಗಳೂರು.ಜು.8: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಆಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.ಹಲವೆಡೆ ರಸ್ತೆ ಮತ್ತು ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ಹಲವು ಕಡೆಗಳಲ್ಲಿ ಅನಾಹುತಗಳು ಸಂಭವಿಸಿದೆ. ಇದೀಗ ಈ ಕುರಿತಾದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ತಾಲೂಕು ಬಿ.ಇ.ಒ ಗಳಿಗೆ ಜಿಲ್ಲಾಧಿಕಾರಿಯವರು ಈ ಜವಾಬ್ದಾರಿನ್ನು ನೀಡಿದ್ದರು. ಆದರೆ ಇದೀಗ ಜಿಲ್ಲಾಧಿಕಾರಿಗಳು ಸ್ವತಃ ರಜೆ ನೀಡಿದ್ದಾರೆ.
ಜಿಲ್ಲಾಡಳಿತಕ್ಕೆ ತರಾಟೆ:
ಶುಕ್ರವಾರ ಬೆಳಗ್ಗೆಯಿಂದ ಬಿಟ್ಟು ಬಿಡದೇ ಜೋರಾಗಿ ಮಳೆ ಸುರಿಯುತ್ತಿದೆ. ರಾತ್ರಿಯೂ ಜೋರಾಗಿ ಸುರಿದಿದೆ. ಹೀಗಿರುವಾಗ ಶಾಲೆಗಳಿಗ ಮೊದಲೇ ರಜೆಯನ್ನು ಘೋಷಿಸಬೇಕು. ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕರೆತಂದು ಬಿಟ್ಟ ಮೇಲೆ ಘೋಷಣೆ ಮಾಡುವುದು ಎಷ್ಟು ಸರಿ? 5-6 ಕಿ.ಮೀ ದೂರದಿಂದ ನಾವು ಮಕ್ಕಳನ್ನು ಕಳುಹಿಸುತ್ತೇವೆ. ಬೆಳಗ್ಗೆ ಕಡಿಮೆಯಾಗದಿದ್ದರೆ ಆಗ ರಜೆ ನೀಡುವ ನಿರ್ಧಾರವನ್ನು ಶಿಕ್ಷಣ ಇಲಾಖೆ ಪ್ರಕಟಿಸುವುದು ಸರಿಯಲ್ಲ ಎಂದು ಪೋಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕೆಲವು ಕಡೆ ಮಳೆಯೇ ಇಲ್ಲದೆ ಜನ ಸೊರಗುತ್ತಿದ್ದಾರೆ, ಆದರೆ ದಕ್ಷಿಣ ಕನ್ನಡ ಮಳೆಯಿಂದ ಸೊರಗುವಂತೆ ಆಗಿದೆ. ಮಳೆಯ ಸಂದರ್ಭ ಜನರು ಸುರಕ್ಷಿತವಾಗಿರುವುದು ಒಳ್ಳೆಯದು , ಯಾರು ಮರದ ಕೆಳಗೆ ಅಥವಾ ಗೋಡೆಯ ಪಕ್ಕ ನಿಲ್ಲ ಬೇಡಿ… ಹರಿಯುವ ನೀರಿನಲ್ಲಿ ಇಳಿಯಬೇಡಿ. . . .ಧನ್ಯವಾದ ಜನದ್ವನಿ