ಅಬುದಾಬಿ: ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಅಬುದಾಬಿಯ ಜನವಸತಿ ಪ್ರದೇಶದ ಮೇಲೆ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ಏಷ್ಯಾ ಮೂಲದ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಯುಎಇ (ಸಂಯುಕ್ತ ಅರಬ್ ಸಂಸ್ಥಾನ) ಅಧಿಕೃತವಾಗಿ ದೃಢಪಡಿಸಿದೆ.
ಶನಿವಾರ ಮುಂಜಾನೆ ಇರಾನ್ ಉಡಾವಣೆ ಮಾಡಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯುಎಇಯ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹೊಡೆದುರುಳಿಸಿತ್ತು. ಆದರೆ, ಈ ಕ್ಷಿಪಣಿಯ ಚೂರುಗಳು ಜನನಿಬಿಡ ಪ್ರದೇಶದಲ್ಲಿ ಬಿದ್ದಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಮೃತಪಟ್ಟ ವ್ಯಕ್ತಿಯ ಹೆಸರು ಅಥವಾ ಇತರ ವಿವರಗಳನ್ನು ಸಚಿವಾಲಯ ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ತಕ್ಕ ಪ್ರತ್ಯುತ್ತರದ ಎಚ್ಚರಿಕೆ:
“ದೇಶದ ಮೇಲೆ ನಡೆದ ಈ ದಾಳಿಯು ಅತ್ಯಂತ ಕ್ರೂರವಾದುದು. ಇದಕ್ಕೆ ತಕ್ಕ ರೀತಿಯಲ್ಲಿ ತಿರುಗೇಟು ನೀಡುವ ಪೂರ್ಣ ಹಕ್ಕು ಯುಎಇಗೆ ಇದೆ” ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇರಾನ್‌ನ ಈ ಕ್ರಮವನ್ನು “ಹೇಡಿತನದ ಕೃತ್ಯ” ಮತ್ತು “ಅಪಾಯಕಾರಿ ಪ್ರಚೋದನೆ” ಎಂದು ಯುಎಇ ಕಿಡಿಕಾರಿದೆ. ಅಬುದಾಬಿಯ ದಕ್ಷಿಣ ಭಾಗದಲ್ಲಿರುವ ಅಲ್ ದಫ್ರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಈ ನೆಲೆಯಲ್ಲಿ ಅಮೆರಿಕ ಮತ್ತು ಯುಎಇ ವಾಯುಪಡೆಗಳ ಜಂಟಿ ಕಾರ್ಯಾಚರಣೆ ನಡೆಯುತ್ತಿದೆ.
ದಾಳಿಯ ಹಿನ್ನೆಲೆ:
ಇತ್ತೀಚೆಗೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಎಂಬ ಮಿಲಿಟರಿ ಕಾರ್ಯಾಚರಣೆಗೆ ಪ್ರತೀಕಾರವಾಗಿ ಇರಾನ್ ಈ ದಾಳಿ ನಡೆಸಿದೆ. ಮಧ್ಯಪ್ರಾಚ್ಯದ ವಿವಿಧ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ.
ಪ್ರಸ್ತುತ ಯುಎಇಯಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಹೊರ್ಮುಜ್ ದಿಗ್ಬಂಧನ: ‘ಎಡವಟ್ಟು ಮಾಡಬೇಡಿ’- ಅಮೆರಿಕಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ
ಹಜ್ ಸೀಸನ್: ಮಕ್ಕಾ ಪ್ರವೇಶದ ಅನುಮತಿ ಪತ್ರ ವಿತರಣೆ ಆರಂಭ
ಗಲ್ಫ್ ವಲಯದಲ್ಲಿ ಶಾಂತಿಯ ಹೊಸ ಪರ್ವ – ಕದನ ವಿರಾಮ ನಿರ್ಧಾರಕ್ಕೆ ಜಿಸಿಸಿ ಪೂರ್ಣ ಬೆಂಬಲ
ಬಹ್ರೇನ್ ವೈಮಾನಿಕ ಮಾರ್ಗ ಮುಕ್ತ- ವಿಮಾನಯಾನ ಪುನಾರಂಭಕ್ಕೆ ಹಸಿರು ನಿಶಾನೆ
ದಾಳಿಯ ಭೀತಿ: ಸೌದಿ-ಬಹ್ರೇನ್ ‘ಕಾಸ್ವೇ’ ಬಂದ್- ಸಂಚಾರ ಸಂಪೂರ್ಣ ಸ್ಥಗಿತ
ಸೌದಿ ಅರೇಬಿಯಾ: ಇನ್ನೂ 69 ಹುದ್ದೆಗಳಲ್ಲಿ ಶೇ.100 ಸ್ವದೇಶೀಕರಣ ಜಾರಿ
ಸೌದಿ: ನಾಳೆಯಿಂದ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ಇರಾನ್ ದಾಳಿ; ವಿಶ್ವದ ಅತಿದೊಡ್ಡ ‘ಎಮಿರೇಟ್ಸ್ ಗ್ಲೋಬಲ್ ಅಲ್ಯೂಮಿನಿಯಂ’ ಕಾರ್ಯಾಚರಣೆ ಸ್ಥಗಿತ
ಹಜ್-ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಪವಿತ್ರ ಮಕ್ಕಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ
ಚಾಲನೆ ವೇಳೆ ತಿಂಡಿ ಮತ್ತು ಮೇಕಪ್ಗೆ ಬ್ರೇಕ್- ಸೌದಿ ಸಂಚಾರಿ ವಿಭಾಗದ ಕಟ್ಟುನಿಟ್ಟಿನ ಸೂಚನೆ