ನವದೆಹಲಿ: ವಿಮಾನ ಪ್ರಯಾಣಿಕರ ಹಿತದೃಷ್ಟಿಯಿಂದ ಭಾರತೀಯ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದೆ. ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣವನ್ನು ರದ್ದುಗೊಳಿಸಲು ಅಥವಾ ಬದಲಾವಣೆ ಮಾಡಲು ಅವಕಾಶ ನೀಡುವ ‘ಲುಕ್-ಇನ್’ (Look-in) ಅವಧಿಯನ್ನು ಪರಿಚಯಿಸಲಾಗಿದೆ.
ಹೊಸ ನಿಯಮದ ಪ್ರಮುಖ ಅಂಶಗಳು:
- ಉಚಿತ ರದ್ದತಿ ಮತ್ತು ಬದಲಾವಣೆ: ಟಿಕೆಟ್ ಕಾಯ್ದಿರಿಸಿದ 48 ಗಂಟೆಗಳ ಒಳಗೆ ಪ್ರಯಾಣಿಕರು ಯಾವುದೇ ದಂಡವಿಲ್ಲದೆ ಟಿಕೆಟ್ ರದ್ದುಗೊಳಿಸಬಹುದು. ಒಂದು ವೇಳೆ ಪ್ರಯಾಣದ ದಿನಾಂಕವನ್ನು ಬದಲಾಯಿಸುವುದಿದ್ದರೆ, ಕೇವಲ ಟಿಕೆಟ್ ದರದ ವ್ಯತ್ಯಾಸವನ್ನು (Price difference) ಮಾತ್ರ ಪಾವತಿಸಬೇಕಾಗುತ್ತದೆ.
- ಅನ್ವಯಿಸುವಿಕೆ: ಈ ಸೌಲಭ್ಯವು ವಿಮಾನಯಾನ ಸಂಸ್ಥೆಗಳ ಅಧಿಕೃತ ವೆಬ್ಸೈಟ್ ಮೂಲಕ ನೇರವಾಗಿ ಬುಕ್ ಮಾಡುವವರಿಗೆ ಮಾತ್ರ ಲಭ್ಯವಿರುತ್ತದೆ.
- ಸಮಯ ಮಿತಿ: ಪ್ರಯಾಣಿಕರು ದೇಶೀಯ ವಿಮಾನ ಪ್ರಯಾಣಕ್ಕೆ ಕನಿಷ್ಠ 7 ದಿನಗಳ ಮೊದಲು ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೆ 15 ದಿನಗಳ ಮೊದಲು ಟಿಕೆಟ್ ಬುಕ್ ಮಾಡಿದ್ದರೆ ಮಾತ್ರ ಈ ಸೌಲಭ್ಯ ಪಡೆಯಲು ಸಾಧ್ಯ. 48 ಗಂಟೆಗಳ ನಂತರ ರದ್ದುಗೊಳಿಸಿದರೆ ಸಾಮಾನ್ಯ ಶುಲ್ಕಗಳು ಅನ್ವಯವಾಗುತ್ತವೆ.
ಹೆಸರು ತಿದ್ದುಪಡಿ ಮತ್ತು ರೀಫಂಡ್ ನಿಯಮಗಳು:
ಟಿಕೆಟ್ನಲ್ಲಿನ ಹೆಸರಿನ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಲು ಇನ್ನು ಮುಂದೆ 24 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಇದಕ್ಕೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಅಲ್ಲದೆ, ರಿಫಂಡ್ ಪ್ರಕ್ರಿಯೆಯನ್ನು DGCA ವೇಗಗೊಳಿಸಿದೆ:
- ಕ್ರೆಡಿಟ್ ಕಾರ್ಡ್ ಬುಕಿಂಗ್: 7 ದಿನಗಳ ಒಳಗಾಗಿ ಹಣ ಮರುಪಾವತಿಯಾಗಬೇಕು.
- ಟ್ರಾವೆಲ್ ಏಜೆಂಟ್ ಬುಕಿಂಗ್: 14 ಕೆಲಸದ ದಿನಗಳ ಒಳಗೆ ಹಣ ಹಿಂತಿರುಗಿಸಬೇಕು.
- ರಿಫಂಡ್ ಇಲ್ಲದ ಟಿಕೆಟ್: ಟಿಕೆಟ್ ಹಣ ಮರುಪಾವತಿಗೆ ಅರ್ಹವಲ್ಲದಿದ್ದರೂ, ಪ್ರಯಾಣಿಕರು ಪಾವತಿಸಿದ ತೆರಿಗೆ (Tax) ಮತ್ತು ಇತರ ಶಾಸನಬದ್ಧ ಶುಲ್ಕಗಳನ್ನು ಕಡ್ಡಾಯವಾಗಿ ಹಿಂತಿರುಗಿಸಬೇಕು.
ವೈದ್ಯಕೀಯ ತುರ್ತು ಸಂದರ್ಭ:
ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಆಸ್ಪತ್ರೆ ದಾಖಲೆಗಳನ್ನು ಸಲ್ಲಿಸಿದರೆ, ಪೂರ್ಣ ಹಣದ ಮರುಪಾವತಿ ಅಥವಾ ‘ಕ್ರೆಡಿಟ್ ಶೆಲ್’ (ಮುಂದಿನ ಪ್ರಯಾಣಕ್ಕೆ ಬಳಸುವ ಸೌಲಭ್ಯ) ನೀಡಲಾಗುವುದು ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಜಾರಿ ದಿನಾಂಕ: ಈ ಹೊಸ ಪರಿಷ್ಕೃತ ನಿಯಮಗಳು ಮಾರ್ಚ್ 26 ರಿಂದ ಜಾರಿಗೆ ಬರಲಿವೆ.
















ಇನ್ನಷ್ಟು ಸುದ್ದಿಗಳು
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ