SYS ಕಾವೂರು ಸೆಂಟರ್ , SSF ಕಾವೂರು ಸೆಕ್ಟರ್ ಇದರ ಜಂಟಿ ಆಶ್ರಯದಲ್ಲಿ ಜುಲೈ 3 (ಮಂಗಳವಾರ)ಮಗ್ರಿಬ್ ನಮಾಝಿನ ಬಳಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್, ಮಾಸಿಕ ಅಜ್ಮೀರ್ ಮೌಲೂದ್, ತಹ್ಲೀಲ್ ಸಮರ್ಪಣೆ ಹಾಗೂ ಕ್ಲಾಸ್ ಕಾವೂರು ಕೆ. ಎಚ್ ಬಾವ ಕಾಂಪೌಂಡ್ ನಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಕೆ.ಎಚ್ ಬಾವ(ಅಧ್ಯಕ್ಷರು , SYS ಕಾವೂರು ಸೆಂಟರ್) ವಹಿಸಿದ್ದರು.ನೌಸೀಫ್ ಪಂಜಿಮೊಗರು (ಪ್ರಧಾನ ಕಾರ್ಯದರ್ಶಿ SSF ಕಾವೂರು ಸೆಕ್ಟರ್ ಸ್ವಾಗತಿಸಿದರು.ಶರೀಫ್ ಉಸ್ತಾದ್ ಶಾಂತಿನಗರ ನೇತೃತ್ವದಲ್ಲಿ ಮೌಲೂದ್ ನೆರವೇರಿತು,ಮುಹಮ್ಮದ್ ಮುಸ್ಲಿಯಾರ್ ಶಾಂತಿನಗರ(ಮುಖಂಡರು SYS ಕಾವೂರು ಸೆಂಟರ್),ಹಸನ್ ಮದನಿ ಕೂಳೂರು(ಉಪಾಧ್ಯಕ್ಷರು SYS ಪಂಜಿಮೊಗರು ಯುನಿಟ್ ),ಅಬ್ದುಲ್ ಖಾದರ್ ಕಾವೂರು
(ಪ್ರಧಾನ ಕಾರ್ಯದರ್ಶಿ SYS ಕಾವೂರು ಸೆಂಟರ್),
ತಮೀಮ್ ಕೂಳೂರು(ಮುಖಂಡರು KCF ದಮಾಮ್),ಆಸಿಫ್ ಬೋಂದೆಲ್(ಉಪಾಧ್ಯಕ್ಷರು SSF ಕಾವೂರು ಸೆಕ್ಟರ್) ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಜುನೈದ್ ಸಅದಿ ವಳವೂರು (ಅಧ್ಯಕ್ಷರು SSF ಮಂಗಳೂರು ಡಿವಿಶನ್) ಭಾಗವಹಿಸಿದ್ದರು.