janadhvani

Kannada Online News Paper

ಪುತ್ತೂರು ಗೋಳಿಕಟ್ಟೆಯ  ಉಮ್ರಾ ಯಾತ್ರಾರ್ತಿ ಜಿದ್ದಾದಲ್ಲಿ  ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್

ಪುತ್ತೂರಿನ ಪರ್ಲಡ್ಕದ ಗೋಳಿಕಟ್ಟೆಯ ನಿವಾಸಿಯಾದ ಕರಾವಳಿ ಅಬ್ಬಾಸ್ ಹಾಜಿಯವರು ದಿನಾಂಕ 28/01/2026 ರಂದು ಉಮ್ರಾ ಮುಗಿಸಿ ಊರಿಗೆ ತೆರಳುತ್ತಿದ್ದಾಗ ಜಿದ್ದಾದಲ್ಲಿ  ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಜಿದ್ದಾದ ದಹ್ಬಾನ್ ಖಬರ್ ಸ್ಥಾನದಲ್ಲಿ ಕೆಸಿಎಫ್ ಜಿದ್ದಾ ಝೋನಿನ  ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು

ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ ಜಿದ್ದಾ ಝೋನ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಫಾರೂಕ್ ಬಂಟ್ವಾಳರವರ ನೇತೃತ್ವದಲ್ಲಿ ಹಾಗೂ ಕೆಸಿಎಫ್ ನೇತಾರರಾದ ಹಕೀಂ ಮದೀನಾ ಮುನವ್ವರ, ನಾಸಿರ್ ಹೆಚ್ಕಲ್, ಮೊಹಮ್ಮದ್ ಕುಕ್ಕಾಜೆ ,  ಸಹಿತ ಅನೇಕ ನಾಯಕರು ಸಹಕಾರದೊಂದಿಗೆ ನಡೆಯಿತು.

ಜಿದ್ದಾದ  ಮಸ್ಜಿದ್ ತ್ವೈಬಾ ದಲ್ಲಿ    ಮಗ್ರಿಬ್ ನಮಾಜಿನ ಬಳಿಕ ಮಯ್ಯಿತ್ ನಮಾಝ್ ನಿರ್ವಹಿಸಿ ದಹ್ಬಾನ್ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಕೆಸಿಎಫ್ ನೇತಾರರು ಕುಟುಂಬಸ್ತರು ಹಾಗೂ ಸ್ಥಳೀಯರು ದಫನ ಕಾರ್ಯದಲ್ಲಿ ಸಹಕರಿಸಿದರು.