ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ “ಕೆಸಿಎಫ್ ಡೇ-2026” ಆಚರಣೆಯ ಅಂಗವಾಗಿ “ಸೇವೆ ನಮ್ಮ ಶಕ್ತಿ. ಬದ್ದತೆ ನಮ್ಮ ಗುರುತು” ಎಂಬ ಶಿರ್ಷಿಕೆಯಡಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಫೆಬ್ರವರಿ 6, 2026 (ಶುಕ್ರವಾರ) ಬೆಳಿಗ್ಗೆ 6:30 ರಿಂದ ಬೆಳಿಗ್ಗೆ 11:00 ರವರೆಗೆ ಸಲ್ಮಾನಿಯ ಮೆಡಿಕಲ್ ಕಾಂಪ್ಲೆಕ್ಸ್ ನಲ್ಲಿ ಈ ಶಿಬಿರ ನಡೆಯಲಿದೆ.
ರಕ್ತದಾನವು ಶ್ರೇಷ್ಠ ದಾನವಾಗಿದ್ದು, ಇದು ಹಲವು ಜೀವಗಳನ್ನು ಉಳಿಸುವ ಒಂದು ಮಹತ್ತರವಾದ ಮಾನವೀಯ ಸೇವೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಂಘಟನೆಯ ಕಾರ್ಯಕರ್ತರು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೆಸಿಎಫ್ ಬಹರೈನ್ ಸೌತ್ ಝೋನ್ ನಾಯಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


